ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 147ನೇ ಬೂತ್‍ನ ನೂತನ ಅಧ್ಯಕ್ಷರಾಗಿ ಗಣೇಶ್ ದೊಳ, ಕಾರ್ಯದರ್ಶಿಯಾಗಿ ಕೇಶವ ಗೌಡ ಬರೆಮೇಲು ಆಯ್ಕೆಯಾಗಿದ್ದಾರೆ.
ಪರಮಾರ್ಗ ಯೋಗೇಶ್ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ..
ನೂತನ ಸದಸ್ಯರಾಗಿ ದಿನೇಶ್ ದೊಳ, ಪವಿತ್ರ ಆನಂದ ಗೌಡ, ರಮೇಶ್ ಕಾಯರ್ ಮುಗೇರು, ರಮೇಶ್ ಗೌಡ, ಸಂಧ್ಯಾ ಗಣೇಶ್ ಸಾಲಿಯಾನ್, ಹರಿಣಾಕ್ಷಿ, ಸಂದೀಪ್, ಬಾಲಪ್ಪ ಗೌಡ , ಮೋನ್ ದಾಸ್ ನಾಯಕ್, ಗಂಗಾಧರ ಗೌಡ, ಆಯ್ಕೆಯಾಗಿದ್ದಾರೆ..
ಈ ಸಂದರ್ಭದಲ್ಲಿ ನರಿಮೊಗರು ಸಿಎ ಬ್ಯಾಂಕಿನ ನಿರ್ದೇಶಕರಾದ ಜಯರಾಮ್ ಪೂಜಾರಿ, ಮಹಿಳಾ ಮೋರ್ಚದ ಅಧ್ಯಕ್ಷರಾದ ಯಶೋಧ ಕೆ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಪುರಂದರ ಬಂಗೇರ, ಜಗದೀಶ್ ಕರ್ಕೇರ ,ಗಣೇಶ್ ಸಾಲಿಯನು, ಯೋಗೇಶ್ ಉಪಸ್ಥಿತರಿದ್ದರು.