ವಿಟ್ಲ : ವಿಟ್ಲದ ಮಂಗಲಪದವು ನಿವಾಸಿ ನಿವೃತ್ತ ಸೈನಿಕ ಕೂಸಪ್ಪ ಶೆಟ್ಟಿ(81) ವಯೋ ಸಹಜವಾಗಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇವರು ಪುತ್ತೂರು ಮಾಜಿ ಸೈನಿಕ ಸಂಘದ ಅತ್ಯಂತ ಹಿರಿಯ ಸದಸ್ಯರಾಗಿದ್ದು, ಭಾರತೀಯ ಭೂಸೇನೆಯಲ್ಲಿ 20 ವರ್ಷಗಳ ಸೇವೆ ಗೈದಿದ್ದ ಇವರು 1962 ಮತ್ತು 1971 ರ ಯುದ್ಧದಲ್ಲಿ ಭಾಗವಹಿಸಿದ್ದಾರೆ.
ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಎಂ. ಕೆ. ನಾರಾಯಣ ಭಟ್, ಉಪಾಧ್ಯಕ್ಷ ದಾಸಪ್ಪ ಪೂಜಾರಿ, ಕಾರ್ಯದರ್ಶಿ ನಾಗಪ್ಪ ಗೌಡ ಮತ್ತು ಅನೇಕ ಮಾಜಿ ಸೈನಿಕರು ಮೃತರ ಅಂತಿಮ ದರ್ಶನ ಪಡೆದುಕೊಂಡರು.
ಮೃತರ ಗೌರವಾರ್ಥವಾಗಿ ಮಾಜಿ ಸೈನಿಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಮಾಲಾರ್ಪಣೆ ಮಾಡಿದರು. ನಂತರ ಸೇರಿದ್ದ ಎಲ್ಲ ಸೈನಿಕರೂ ಸಲ್ಯೂಟ್ ನೀಡಿ ಅಂತಿಮ ವಿದಾಯ ಸಲ್ಲಿಸಿದರು.
ಮೃತರು ಪತ್ನಿ, ಪುತ್ರ ,ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.