ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನಿಂಗ್‍್ ವಿಭಾಗ ಫಸೇರಾ ಹಾಗೂ ಸಾಂಸ್ಕೃತಿಕ ಲಲಿತಾ ಕಲಾ ಸಂಘದ ವತಿಯಿಂದ ಪ್ರಿನ್ಸ್ ಆ್ಯಂಡ್ ಪ್ರಿನ್ಸಸ್ ಫ್ಯಾಷನ್ ಶೋ ಅಡಿಷನ್ ಕಾರ್ಯಕ್ರಮದ ಉದ್ಘಾಟನೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಮಾಜಿ ಅಧ್ಯಕ್ಷ, ಬನ್ನೂರು ಎ.ವಿ.ಜಿ ಸ್ಕೂಲ್ ಸಂಚಾಲಕ ವೆಂಕಟ್ರಮಣ ಗೌಡ ಕಳುವಾಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನಸುಕಾಣಬೇಕು. ಆದರೆ ಆ ಕನಸು ನಿದ್ರಾಸ್ಥಿತಿಯಲ್ಲಿ ಇರದೆ ಎಚ್ಚರದಲ್ಲಿದ್ದಾಗ ಆಗಬೇಕು. ಇದಕ್ಕೆ ಉತ್ತಮ ಉದಾಹರಣೆ ಜಯಂತ್ ನಡುಬೈಲುರವರು. ಯಾಕೆಂದರೆ ಅವರು ಜೀವನದಲ್ಲಿ ಮೇಲೆ ಬರಬೇಕೆಂದು ಕನಸು ಕಂಡವರು. ಪುತ್ತೂರಿನಲ್ಲಿ ಅಕ್ಷಯ ಕಾಲೇಜು ಪ್ರಥಮ ಬಾರಿಗೆ ಫ್ಯಾಷನ್ ಡಿಸೈನ್ ಕಾಲೇಜು ಆರಂಭಿಸಿದ್ದು. ಇಂದು ಇದೇ ಕಾಲೇಜಿನಲ್ಲಿ ಫ್ಯಾಷನ್ ಶೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಕಾಲೇಜು ಚೇರ್ ಮ್ಯಾನ್ ನಡುಬೈಲು ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಫ್ಯಾಷನ್ ಡಿಸೈನ ಕೋರ್ಸ್ ಅಕ್ಷಯ ಕಾಲೇಜಿನಲ್ಲಿ ಆರಂಭಿಸಿದ್ದೇವೆ. ಹದಿನೆಂಟು ವರ್ಷದೊಳಗಿನ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಪುತ್ತೂರಿನಲ್ಲಿ ತಾಲೂಕು ಮಟ್ಟದ ಫ್ಯಾಷನ್ ಶೋ ಸ್ಪರ್ಧೆ ಮಾಡುತ್ತಿದ್ದೇವೆ. ಫ್ಯಾಷನ್ ಡಿಸೈನ್ ಕೋರ್ಸ್ ನಲ್ಲಿ ಸಾರ್ವಜನಕರಿಗೆ ಗೊಂದಲವಿದೆ. ಮಕ್ಕಳ ಮನಸ್ಸಿನಲ್ಲಿ ಕೀಳೀರಿಮೆಯನ್ನು ಹೋಗಲಾಡಿಸುವುದೇ ಕಾರ್ಯಕ್ರಮದ ಉದ್ಧೇಶ ಎಂದರು.
ಕಾಲೇಜು ಪ್ರಾಂಶುಪಾಲ ಸಂಪತ್.ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ, ಕಾರ್ಯಕ್ರಮ ಸಂಯೋಜಕ ಕಿಶನ್ ಎನ್.ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಕಾಲೇಜು ಉಪಪ್ರಾಂಶುಪಾಲ ರಕ್ಷಣ್ಟಿ.ಆರ್., ಫ್ಯಾಷನ್ ಡಿಸೈನ್ ವಿಭಾಗದ ಫಸೇರಾ, ಅಧ್ಯಕ್ಷೆ ದೀಕ್ಷಾ, ಕಾರ್ಯದರ್ಶಿ ನವಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಕಾಲೇಜಿನ ಗ್ರಂಥಪಾಲಕಿ ಪ್ರಭಾವತಿ, ದೀಪ್ತಿ, ಫ್ಯಾಶನ್ ಡಿಸೈನ್ ವಿಭಾಗ ಮುಖ್ಯಸ್ಥೆ ಅನುಷಾ, ಅಕ್ಷಯ ಕಾಲೇಜಿನ ಹಿರಿಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿ ನಿಧನ್ಯಶ್ರೀ ಭಾಗವಹಿಸಿದರು. ಉಪನ್ಯಾಸಕಿ ರಶ್ಮಿ ಹಾಗೂ ನಿಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.
3 ವಿಭಾಗಗಳಲ್ಲಿ ಸ್ಪರ್ಧೆ:
6 ರಿಂದ 10, 11 ರಿಂದ 14 ಹಾಗೂ 15 ರಿಂದ 18 ರ ವರೆಗಿನ ವಯೋಮಾನ ಸೇರಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರಥಮ ಆಡಿಷನ್ ಸ್ಪರ್ಧೆಯಲ್ಲಿ ತಲಾ 20 ವಿದ್ಯಾರ್ಥಿಗಳಂತೆ ವಿಂಗಡಿಸಲಾಗಿ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಪ್ರಥಮ ಆಡಿಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ `ಎಕ್ಸಲೆಂಟ್ ಫರ್ ಪಾರ್ಮೆನ್ಸ್ ಪ್ರಮಾಣಪತ್ರವನ್ನುವಿತರಿಸಲಾಯಿತು.
200 ಕ್ಕೂ ಮಿಕ್ಕಿ ಸ್ಪರ್ಧಿಗಳು :
ಇದೇ ಮೊದಲ ಬಾರಿಗೆ ಅಕ್ಷಯ ಕಾಲೇಜು ಆಯೋಜಿಸುತ್ತಿರುವ ಪ್ರಿನ್ಸ್ ಫ್ಯಾಶನ್ ಶೋ ಕಾರ್ಯಕ್ರಮದ ಹೆಸರು ನೋಂದಣಿಗೆ ನ.27 ಗಡುವು ನೀಡಲಾಗಿತ್ತು. ಪುತ್ತೂರು, ಮಂಗಳೂರು, ಸುಳ್ಯ, ಸುರತ್ಕಲ್, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಭಾಗಗಳಿಂದ ಸುಮಾರು 200 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಹೆಸರು ನೋಂದಾಯಿಸಿದ್ದರು.