ಪುತ್ತೂರು: ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಪುತ್ತೂರು ಶಾಸಕ ಹೇಳಿಕೆಗಳು ಕೇವಲ ಗಾಳಿ ಮಾತಿಗೆ ಮೀಸಲಾಗಿದ್ದು, ನಾನು ಹೊಡೆದಂತೆ ಮಾಡುತ್ತೇನೆ, ನೀವು ಕೂಗಿದಂತೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ, ಮಾಜಿ ತಾಪಂ ಅಧ್ಯಕ್ಷ ಹರೀಶ್ ಬಿಜತ್ರೆ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಸಚಿವರುಗಳು ಹಗರಣಗಳಲ್ಲಿ ಸಿಲುಕಿ ಕದ್ದ ಮಾಲನ್ನು ಹಿಂತಿರುಗಿಸಿ ನಾವುಗಳು ಸಾಚಾ ಎಂದು ತೋರಿಸುತ್ತಿದ್ದಾರೆ. ಇದೇ ರೀತಿ ಪುತ್ತೂರಿನಲ್ಲಿ ಶಾಸಕರ ಮಾತು ಕೇಳುವಾಗ ಅದೇ ರೀತಿಯ ವ್ಯವಸ್ಥೆ ಆಗುತ್ತಿದೆ ಎಂದು ಸಂಶಯ ಮೂಡುತ್ತಿದೆ. ಯಾರೇ ಲಂಚ ಕೇಳೀದರೂ ನನ್ನಲ್ಲಿ ಹೇಳಿ ಎಂದು ಲಂಚ ತಿಂದ ಇಲಾಖಾ ಅಧಿಕಾರಿಗಳಲ್ಲಿ ತೆಗೆದುಕೊಂಡ ಲಂಚದ ಹಣ ಹಿಂತಿರುಗಿಸಿ ನಿಮ್ಮ ಕೆಲಸ ಮಾಡಿ ಎಂದು ಇದರ ಅರ್ಥ. ಲಂಚ ತೆಗೆದದ್ದು ಗೊತ್ತಾದರೆ ಹಿಂತಿರುಗಿಸಿದ್ದು ಗೊತ್ತಾಗಿಲ್ಲ ಎಂದರೆ ಜೇಬಿನಲ್ಲಿ ಇರಿಸಿ ಎಂದು ನಿಮ್ಮ ವಾದವೇ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.
ಇನ್ನಾದರೂ 916 ಚಿನ್ನ ಎಂದು ಹೇಳುವ ಶಾಸಕರು ಪುತ್ತೂರಿನ ಇಲಾಖೆಗಳಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.