ಪುತ್ತೂರು: ಪುತ್ತೂರು ನಗರದ ರಸ್ತೆಯ ಅವ್ಯವಸ್ಥೆಯ ಕುರಿತು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಸದಸ್ಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಮಾಕರವಾಗಿ ಸಂದೇಶ ರವಾನಿಸಿದ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಗೆ ದೂರು ನೀಡಲು ಹೋದ ನಗರಸಭೆ ಅಧ್ಯಕ್ಷೆ ಲೀಲಾವತಿ ಅವರನ್ನು ದೂರು ಸ್ವೀಕರಿಸದೆ ಸತಾಯಿಸಿದ ಘಟನೆ ಇಂದು ನಡೆದಿದೆ.
ಪುತ್ತೂರು ನಗರಸಭೆಯ ಆಡಳಿತ ಇಂದು ಬಿಜೆಪಿ ಕೈಯಲ್ಲಿದೆ, ಪುತ್ತೂರು ಪೇಟೆಯ ರಸ್ತೆಗಳು ನಗರಸಭೆಯ ಅಧೀನದಲ್ಲಿದೆ. ಸಿಟಿ ರಸ್ತೆಗಳನ್ನು ರಿಪೇರಿ ಮಾಡದ ನಗರಸಭೆಯ ಬಿಜೆಪಿ ಆಡಳಿತ ಕೇವಲ ಕಡ್ಲೆಕಾಯಿ ತಿನ್ನುವುದಕ್ಕೆ ಮಾತ್ರ ಇರುವುದೇ ?, ಪ್ರತಿಯೊಂದರಲ್ಲೂ ಕಮೀಷನ್ ತಿಂದು ತೇಗುವುದಕ್ಕೆ ಮಾತ್ರ ಸೀಮಿತವೇ ಎಂದೆಲ್ಲಾ ಅಮಾನವೀಯ ರೀತಿಯಲ್ಲಿ ಇಲ್ಲಸಲ್ಲದ ಮಾತುಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು.
ಇದನ್ನು ಮನಗಂಡ ನಗರಸಭೆ ಅಧ್ಯಕ್ಷರು ದೂರು ನೋಡಲು ಹೊದಾಗ ಠಾಣೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ನಗರಸಭೆ ಬಿಜೆಪಿ ಸದಸ್ಯರು, ಮುಖಂಡರು ಠಾಣೆಗೆ ಜಮಾಯಿಸಿ ಠಾಣಾ ಮೆಟ್ಟಿನಲ್ಲಿ ಕುಳಿತು ಪ್ರತಿಭಟನೆ ನಡೆಸಿ ಒಂದು ಗಂಟೆಯಿಂದ ಕಾಯ್ತಾ ಇದ್ದೇವೆ. ನಿಮಗೆ ಗೌರವ ಕೊಟ್ಟು ಬಂದದ್ದು. ನಾವು ಏನು ಮಾಡಬೇಕು ಅದನ್ನು ಮಾಡುತ್ತವೆ. ಕಾನೂನುಕ್ರಮ ತೆಗೆದುಕೊಳ್ಳಲು ಆಗುವುದಿಲ್ಲವೇ? .ಓನ್ ಡಿಸಿಶಸನ್ ತೆಗೆದುಕೊಳ್ಳಲು ತಾಕತ್ತಿಲ್ಲವೇ. ಅವನ ಮೇಲೆ ಅನುಕಂಪ ಇದೆ. ಒಬ್ಬ ದಲಿತ ಮಹಿಳೆಗೆ, ಅದೂ ನಗರಸಭೆ ಅಧ್ಯಕ್ಷರಿಗೆ ಗೌರವ ನೀಡಲು ಆಗದಿದ್ದರೆ ಜನಸಾಮಾನ್ಯರ ಬದುಕು ಹೇಗಿರಬಹುದು ಎಂದು ಕೆಂಡಾಮಂಡಲವಾದರು.
ಈಗಾಗಲೇ ಮಹಿಳಾ ಠಾಣೆಗೆ ದೂರು ನೀಡಿದ್ದೇವೆ. ಮುಂದಿನ 24 ಗಂಟೆಯೊಳಗೆ ಆರೋಪಿ ಮೇಲೆ ದೂರು ದಾಖಲಿಸಿ ಬಂಧನ ಮಾಡಬೇಕು. ನಗರಸಭೆ ಅಧ್ಯಕ್ಷರಿಗೆ ನ್ಯಾಯ ನೀಡಬೇಕು. ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.