ಒಡಿಯೂರು  ಶ್ರೀಗಳಿಂದ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು :  ಡಿ. 25 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ನಡೆಯಲಿರುವ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು  ಇದರ  56 ನೇ ವಾರ್ಷಿಕೋತ್ಸವ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ” ವಿಂಶತಿ”ವರ್ಷದ  ಆಮಂತ್ರಣ ಪತ್ರಿಕೆಯನ್ನು  ಒಡಿಯೂರಿನಲ್ಲಿ ಪರಮಪೂಜ್ಯ ಶ್ರೀ  ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭಹಾರೈಸಿದರು .

ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಮಹಿಳಾ ಕಲಾವಿದರಿಂದ ಯಕ್ಷ ತಾಪಸಿಯರು  ಸರಣಿ ಸಂವಾದ ಕಾರ್ಯಕ್ರಮ, ಹಿರಿಯ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಸಂಘಟಕ ಬಿ.ಭುಜಬಲಿ ಧರ್ಮಸ್ಥಳ ಇವರಿಗೆ ಯಕ್ಷಾಂಜನೇಯ ಪ್ರಶಸ್ತಿ , ಭವ್ಯಶ್ರೀ ಕುಲ್ಕುಂದ ಇವರಿಗೆ ವಿಂಶತಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ತಿಳಿಸಿದರು.

ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ.ರಾವ್ , ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ , ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಜೆ ಸಿ ಅಡಿಗ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top