ಬೆಂಗಳೂರು : ಮಕ್ಕಳಿಗೆ ಕರ್ನಾಟಕದ ವಿವಿಧ ನೃತ್ಯ ಸ್ಪರ್ಧೆಯ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಮಾತನಾಡಿ ” ಮಕ್ಕಳನ್ನು ಹುರಿದುಂಬಿಸುವ ಈ ಬಗೆಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಹಾಗೆಯೆ ಹೋಟೆಲ್ ಕಾರ್ಮಿಕರಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಾಣಬಹುದು” ಎಂದರು. ಇನ್ನೋರ್ವ ಅಥಿತಿ, ಮಿಸೆಸ್ ಯುನಿವರ್ಸ ಶ್ರೀಮತಿ ಸತ್ಯವತಿ ಬಸವರಾಜು ಶುಭ ಹಾರೈಸಿದರು.
ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ “ಮುಳಿಯದ ವಿಶೇಷ ಡಿಸೈನ್ಗಳ ಮಾರಾಟದ ಜೊತೆಗೆ ಸಾಮಾಜಿಕ ಕಳಕಳಿ ಇರುವುದು ವಿಶೇಷ” ಎಂದರು.
ಈ ಕಾರ್ಯಕ್ರಮ ಸಂಧ್ಯಾ ಜಯರಾಮ್ ಇವರ ಸಹಯೋಗದಲ್ಲಿ ನಡೆಯಿತು . ಸಮಾರೋಪ ಸಮಾರಂಭದಲ್ಲಿ ಚಿತ್ರ ನಟ ಸ್ಮೈಲ್ ಶಿವು ಹಾಗೂ ಕಾಸಿಯಾದ ಗೌರವ ಕಾರ್ಯದರ್ಶಿ, ಉದ್ಯಮಿ ಶ್ರೀ ಸುರೇಶ್ ಎನ್. ಸಾಗರ್ ವೇದಿಕೆಯಲ್ಲಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಮುಳಿಯ ಪ್ರಬಂಧಕರಾದ ಯನ್.ಸುಬ್ರಮಣ್ಯ ಭಟ್, ಸಂಜೀವ, ಶಾಮ್, ಸತೀಶ್ ಉಪಸ್ಥಿತರಿದ್ದರು.