ಈ ವರ್ಷ ದಿವ್ಯಾಂಗರಿಗೆ ಬರೀ 10 ಕೋ. ರೂ. ಅನುದಾನ
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ದಿವ್ಯಾಂಗರಿಗೆ ಅನುದಾನ ಕಡಿತ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ ಶೇ.80ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಇದನ್ನೂ ಓದಿ: ಸಭೆಗಳನ್ನು ರದ್ದು ಮಾಡಿ ದಿಢೀರ್ ಸ್ವಗ್ರಾಮಕ್ಕೆ ತೆರಳಿದ ಏಕನಾಥ್ ಶಿಂಧೆ
ಕರ್ನಾಟಕ ಸರ್ಕಾರವು ದಿವ್ಯಾಂಗರಿಗಾಗಿ ಮೀಸಲಾಗಿದ್ದ ನಿಧಿಯಲ್ಲಿ ಶೇ.80 ಕಡಿತ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯಗಳಿಗೆ ಧಕ್ಕೆ ಆಗಲಿದೆ, ಸರ್ಕಾರ ಇದನ್ನು ಗಮನದಲ್ಲಿಟ್ಟು ಅವರಿಗೆ ಮೀಸಲಿಟ್ಟ ನಿಧಿಯನ್ನು ಅವರಿಗಾಗಿ ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಆಗ್ರಹಿಸಿದೆ.
ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ. ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.