ಮಂಗಳೂರು: ಹರೇಕಳದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದು,ಗಾಯಾಳುವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹರೇಕಳ ಬಿಜೆಪಿ ಬೂತ್ ಅಧ್ಯಕ್ಷ ಶರತ್ ಕುಮಾರ್ ಗಟ್ಟಿ ಅವರ ಮೇಲೆ ಪಂಚಾಯತ್ ನೀರಿನ ಕ್ಷುಲ್ಲಕ ಕಾರಣಕ್ಕಾಗಿ ಮಸೀದಿಯಿಂದ ಬಂದ ಸರಿ ಸುಮಾರು 15-20 ಜನರ ತಂಡ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಹಲ್ಲೆಕೋರ ಮತಾಂತರನ್ನು ತಡೆಯಲು ಬಂದ ಅವರ ಅಜ್ಜಿಯ ಮೇಲೂ ಹಲ್ಲೆ ನಡೆಸಲಾಗಿದೆ. ಇಂದು ಶರತ್ ಕುಮಾರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಹಲ್ಲೆಕೋರರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದರು.
ಹಲ್ಲೆ ನಡೆಸಿರುವ ಆರೋಪಿಗಳು ಕೂಡ ಆಸ್ಪತ್ರೆ ದಾಖಲಾಗಿ ಸುಳ್ಳು ಕೇಸು ದಾಖಲಿಸಲು ಪ್ರಯತ್ನಿಸುತ್ತಿದ್ದು, ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವುದನ್ನು ಕಂಡು ಸಮ್ಮನಿರುವುದು ಸಾಧ್ಯವಿಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುವುದರಿಂದ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ. ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸಲು ಈ ರೀತಿ ಕೃತ್ಯ ಎಸಗುವವರು ಹೀಗೆಯೇ ಮುಂದುವರಿದರೆ ತಕ್ಕ ಉತ್ತರ ನೀಡಲು ಹಿಂದೂ ಸಮಾಜ ಸಿದ್ಧವಾಗಿದೆ. ಶಾಂತಿ ಕಾಪಾಡಾಲು ಮುಸಲ್ಮಾನ ಸಮಾಜದ ಹಿರಿಯರು ಗಮನ ಹರಿಸಬೇಕು ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.