ಪುತ್ತೂರು: ನಗರದಲ್ಲಿ ಈಗಾಗಲೇ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯನ್ನು ತಕ್ಷಣ ದುರಸ್ತಿ ಹಾಗೂ ಡಾಮರೀಕರಣ ಮಾಡಲು ಟೆಂಡರ್ ದಾರರಿಗೆ ಸೂಚನೆ ನೀಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದ್ದಾರೆ.
ಈ ಕುರಿತು ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ನಗರದ ಜನತೆಯ ಬಹುನಿರೀಕ್ಷೆಯಂತೆ ಸಂಪೂರ್ಣ ಡಾಮರೀಕರಣ, ಪ್ಯಾಚ್ ವರ್ಕ್ ಗಳನ್ನು ಮಾಡುವ ನಿಟ್ಟಿನಲ್ಲಿ ಟೆಂಡರ್ ಕರೆಯಲು ಅಕಾಲಿಕ ಮಳೆ ಹಾಗೂ ಚುನಾವಣೆ ಸಂದರ್ಭದಲ್ಲಿ ಆಗಿಲ್ಲ. ಇದೀಗ ಸುಮಾರು 7.83 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಲು ಟೆಂಡರ್ ನೀಡಲಾಗಿದೆ. ಅದರಂತೆ ತಕ್ಷಣ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ನಗರೋತ್ಥಾನ ಯೋಜನೆಯಡಿ ಪರ್ಲಡ್ಕದಿಂದ ಮುಖ್ಯ ರಸ್ತೆಯನ್ನು ಸಂದಿಸುವ ಜಾಗದಲ್ಲಿ ಕಾಮಗಾರಿ ಆಗಿತ್ತು. ಮರುದಿನವೇ ಮಳೆ ಬಂದ್ದರಿಂದ ಹದಗೆಟ್ಟಿದೆ. ತಾಂತ್ರಿಕ ಸಮಸ್ಯೆಯೂ ಉಂಟಾಗಿದೆ. ಇದೀಗ ಟೆಂಡರ್ ದಾರರು ಕಾಮಗಾರಿಯನ್ನು ತಕ್ಷಣದಿಂದ ಮಾಡುವುದಾಗಿ ಒಪ್ಪಿದ್ದಾರೆ. ನರಗರೋತ್ಥಾನ ಯೋಜನೆಯಡಿ ಪರ್ಲಡ್ಕ ಮುಖ್ಯ ರಸ್ತೆ ಕಾಮಗಾರಿ ಆಗಿತ್ತು. ಮರುದಿನವೇ ಮಳೆಯಿಂದ ಸಂಪೂರ್ಣ ಹದಗೆಟ್ಟಿದೆ. ಟೆಕ್ನಿಕಲ್ ಸಮಸ್ಯೆ ಆಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು.