ಮೂರು ವರ್ಷದ ಹಿಂದೆ ಬಯಲಾದ ಬ್ಲೂಫಿಲ್ಮ್ ಪ್ರಕರಣಕ್ಕೆ ಸಂಬಂಧಿಸಿ ದಾಳಿ
ಮುಂಬಯಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ, ಉದ್ಯಮಿ ರಾಜ್ ಕುಂದ್ರಾ ಮನೆ ಮತ್ತು ಕಚೇರಿಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂರು ವರ್ಷದ ಹಿಂದೆ ರಾಜ್ ಕುಂದ್ರ ಬ್ಲೂಫಿಲ್ಮ್ ತಯಾರಿಸಿದ ಆರೋಪಕ್ಕೆ ಗುರಿಯಾಗಿದ್ದರು. ಈ ಕೇಸಿಗೆ ಸಂಬಂಧಿಸಿ ಸೆರೆಯಾಗಿ ಜೈಲಿನಲ್ಲಿದ್ದ ಅವರು ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಬ್ಲೂಫಿಲ್ಮ್ ಕೇಸಿನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಅವರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿಯಾಗಿದೆ.
2012ರಲ್ಲಿ ಬ್ಲೂಫಿಲ್ಮ್ ತಯಾರಿಸಿದ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು ಬಂಧಿಸಲಾಗಿತ್ತು. ಎರಡು ತಿಂಗಳು ಜೈಲಿನಲ್ಲಿದ್ದ ಅವರು 2021ರ ಸೆಪ್ಟೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ನಂತರ ಶಿಲ್ಪಾ ಶೆಟ್ಟಿ ಪತಿಯಿಂದ ದೂರವಿದ್ದಾರೆ ಎನ್ನಲಾಗುತ್ತಿದ್ದರೂ ಅಧಿಕೃತವಾಗಿ ಅವರು ವಿಚ್ಚೇದನ ಪಡೆದುಕೊಂಡಿಲ್ಲ.
2012ರಲ್ಲಿ ಮುಂಬಯಿ ಪೊಲೀಸರು ಬಾಲಿವುಡ್‌ನ ಒಳಗೆ ಕಾರ್ಯಾಚರಿಸುತ್ತಿದ್ದ ಬ್ಲೂಫಿಲ್ಮ್ ಜಾಲವನ್ನು ಬಯಲಿಗೆಳೆದು ಕುಂದ್ರಾ ಸಹಿತ ಹಲವು ಮಂದಿಯನ್ನು ಬಂಧಿಸಿದ್ದರು. ಅವಕಾಶ ಅರಸಿಕೊಂಡು ಬಾಲಿವುಡ್‌ಗೆ ಬರುವ ಯುವಕ-ಯುವತಿಯರನ್ನು ಬಳಸಿಕೊಂಡು ಅಶ್ಲೀಲ ಚಿತ್ರಗಳನ್ನು ತಯಾರಿಸಿ ಪೋರ್ನ್ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುವ ಬೃಹತ್ ಜಾಲ ಆಗ ಬಯಲಿಗೆ ಬಂದಿತ್ತು. ಆದರೆ ಮುಂಬಯಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಬದಲಾದ ಬಳಿಕ ಈ ಪ್ರಕರಣದ ತನಿಖೆ ನಿಗೂಢವಾಗಿ ನಿಂತುಹೋಗಿದೆ. ಈಗ ಇ.ಡಿ. ದಾಳಿಯೊಂದಿಗೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.
ರಾಜ್ ಕುಂದ್ರ ಒಡೆತನದ ಕಂಪನಿಯೊಂದರ ಹಾಟ್‌ಶಾಟ್ಸ್ ಎಂಬ appನಲ್ಲಿ ಬ್ಲೂಫಿಲ್ಮ್‌ಗಳನ್ನು ಅಪ್‌ಲೋಡ್ ಮಾಡಲಾಗುತ್ತಿತ್ತು ಎಂದು ಮುಂಬಯಿ ಪೊಲೀಸರು ತಿಳಿಸಿದ್ದರು. ನಂತರ ಈ ಫಿಲ್ಮ್‌ಗಳು ಪೋರ್ನ್‌ಸೈಟ್‌ಗಳಿಗೆ ಹೋಗುತ್ತಿದ್ದವು. ರಾಜ್ ಕುಂದ್ರ ಜೊತೆ ಉಮೇಶ್ ಕಾಮತ್ ಹಾಗೂ ನಟಿಯರಾದ ಪೂನಂ ಪಾಂಡೆ, ಶೆರ್ಲಿನ್ ಚೋಪ್ರ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.