ಬಂಟ್ವಾಳ : ಗಿರಿಯಪ್ಪ ಎಂಬುವವರು ತೆಂಗಿನಕಾಯಿ ಕೀಳಲು ಹೋಗಿ ಆಯಾ ತಪ್ಪಿ ಕೆಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಅವರ ತೋಟದ ತೆಂಗಿನ ಮರದಿಂದ ಕಾಯಿ ಕೀಳಲು ಮರಕ್ಕೆ ಹತ್ತಿದ್ದರು. ಈ ವೇಳೆ ಜಾರಿ ಕೆಳಗೆ ಬಿದ್ದು ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ದಿನದ 24 ಗಂಟೆಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಗಿರಿಯಪ್ಪ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಬದುಕಿಸಲು ವೈದ್ಯಕೀಯ ತಂಡ ಪ್ರಯತ್ನಿಸಿದರು ಫಲಿಸಲಿಲ್ಲ. ಹಾಗಾಗಿ ಕೊನೆಘಳಿಗೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಗಿರಿಯಪ್ಪ ಅವರ ಅಂಗಾಂಗ ದಾನವನ್ನು ಮಾಡಿದ್ದಾರೆ. ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತರು ಪತ್ನಿ ಹಾಗೂ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.