ನ.25 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ  ಶ್ರೀ ದೇವರಿಗೆ ಮಹಾರುದ್ರ ಯಾಗ ನ.25 ಸೋಮವಾರ ನಡೆಯಲಿದೆ.

ಈ ಯಾಗದಲ್ಲಿ 1333 ರುದ್ರಗಳನ್ನು ಜಪಿಸಿ ಮಹಾದೇವನಿಗೆ ಅರ್ಪಿಸಲಾಗುತ್ತದೆ. ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮೊದಲಾದ ಸೇವೆಗಳು ನಡೆಯಲಿವೆ.

ಕಾರ್ತಿಕ ಸೋಮವಾರದಂದು ನಡೆಯಲಿರುವ ಈ ಯಾಗಕ್ಕೆ ವಸ್ತು ರೂಪದಲ್ಲಿ ಎಳ್ಳು, ಭತ್ತ, ತುಪ್ಪ ಅಥವಾ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಬಹುದು. ಮಹಾರುದ್ರ ಯಾಗದಲ್ಲಿ ಪ್ರಥಮವಾಗಿ ನೋಂದಾಯಿಸಿದ 1333 ಜನರಿಗೆ ಮಾತ್ರ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top