ಸಿ.ಪಿ.ಯೋಗೀಶ್ವರ್‌, ಅನ್ನಪೂರ್ಣ ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ

ರಾಮನಗರ: ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್‌ ಆದರೂ ಜನತೆ ಯೋಗೇಶ್ವರ್‌ ಕೈಹಿಡಿದಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿರುವುದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಮೊದಲ 6 ಸುತ್ತಿನಲ್ಲಿ ನಿಖಿಲ್‌ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.
ಯೋಗೇಶ್ವರ್‌ಗೆ 2 ಬಾರಿ ಸೋಲಿನ ಅನುಕಂಪ ಕೈ ಹಿಡಿದಿದೆ. ಎರಡು ಬಾರಿ ಶಾಸಕರಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲಿಲ್ಲ ಎಂಬ ಬೇಸರ ಇತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ನಂತರ ಡಿ.ಕೆ ಬ್ರದರ್ಸ್ ಚನ್ನಪಟ್ಟಣವನ್ನು ಪ್ರತಿಷ್ಠೆಯಾಗಿ ತಗೆದುಕೊಂಡಿದ್ದರು.

ಚುನಾವಣೆಗೆ 4 ತಿಂಗಳು ಮೊದಲೇ ಡಿಸಿಎಂ ಡಿಕೆ ಶಿವಕುಮಾರ್‌ ಜನತಾ ದರ್ಶನ ಆರಂಭಿಸಿದ್ದರು. ಕಳೆದ ಬಾರಿ ಯೋಗೇಶ್ವರ್‌ಗೆ ಮಿಸ್ ಆಗಿದ್ದ ಅಲ್ಪಸಂಖ್ಯಾತ ಮತಗಳು ಈ ಬಾರಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈ ಹಿಡಿದಿವೆ.



































 
 

ಸಚಿವ ಜಮೀರ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಿಲ್ಲ. ಆಧುನಿಕ ಭಗೀರಥ ಫೈಟ್‌ನಲ್ಲಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಿದ ಇಮೇಜ್‌ನಲ್ಲಿ ಜನರು ಯೋಗೇಶ್ವರ್‌ ಕೈ ಹಿಡಿದಿದ್ದಾರೆ.
ಸಂಡೂರಿನಲ್ಲಿ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ವಿರುದ್ಧ ವಿಜಯಶಾಲಿಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ. ನಾವು ಒಂದು ವರ್ಷ, ಆರು ತಿಂಗಳಿಂದಲೇ ಅಭ್ಯರ್ಥಿ ತಯಾರು ಮಾಡಿ ಬಿಟ್ಟಿದ್ದರೆ ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿತ್ತು ನಾವು ಕೊನೆಯ ಹಂತದಲ್ಲಿ ಚುನಾವಣೆ ಘೋಷಣೆ ಆದಮೇಲೆ ಅಭ್ಯರ್ಥಿ ತಯಾರು ಮಾಡಿದ್ದು ಕೂಡಾ ಹಿನ್ನೆಡೆ ಆಯ್ತು ಎಂದು ವಿಪಕ್ಷ ನಾಯಕ ಆರ್. ಅಶೋಕ್​ ಹೇಳಿದರು.

ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕೊನೆಯವರೆಗೂ ನಾವು ಅಭ್ಯರ್ಥಿ ಘೋಷಿಸಿರಲಿಲ್ಲ. ಬೇಗ ಅಭ್ಯರ್ಥಿ ಘೋಷಣೆ ಮಾಡಿದ್ದು ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್ ಆಗಿದೆ. ರಾಜೀನಾಮೆ ಕೊಟ್ಟ ಕೂಡಲೇ ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಗೆಲುವು ಆಗುತ್ತಿತ್ತು ಎಂದರು. ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ‌‌‌ ಹೊಣೆ ನಾನೇ ಹೊರುವೆ ಎಂದು ಬಿಜೆಪಿ‌ ಅಭ್ಯರ್ಥಿ ಬಂಗಾರು ಹನುಮಂತ ಹೇಳಿದರು. ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top