ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡ ಜೀತು ನೇಲ್ಯಪಲ್ಕೆ | ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕದಿಂದ ಧನಸಹಾಯ ಹಸ್ತಾಂತರ

ಬಂಟ್ವಾಳ: ತೀರಾ ಕಡು ಬಡತನದಲ್ಲಿದ್ದ ಆದಿದ್ರಾವಿಡ ಸಮುದಾಯದ ಜೀತು ನೇಲ್ಯಪಲ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಾಯಗೊಂಡಿದ್ದು, ಜೀವನ ನಿರ್ವಹಣೆ ಕಷ್ಟದಲ್ಲಿದ್ದುದನ್ನು ಮನಗಂಡು ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಕೇಸರಿ ಶಾಖೆ ಮೀಯಾರುಪಲ್ಕೆ ಸರಪಾಡಿ ಕಾರ್ಯಕರ್ತರು ಧನಸಹಾಯ ನೀಡಿದರು.

ಬೆಂಕಿ ತಾಗಿದ ಪರಿಣಾಮ ಮುಖ, ಕಿವಿ ಹಾಗೂ ದೇಹದ ಭಾಗ ಸುಟ್ಟು ಹೋಗಿದ್ದು, ದಾನಿಗಳ ಮೂಲಕ ಸಂಗ್ರಹಿಸಲ್ಪಟ್ಟ 25,950 ರೂಪಾಯಿಗಳನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಬಜರಂಗದಳ ಮೀಯಾರುಪಲ್ಕೆ ಘಟಕದ ಸಂಯೋಜಕ ಸುನೀಲ್ ಮೀಯಾರುಪಲ್ಕೆ, ಬಜರಂಗದಳದ ಸಹಸಂಯೋಜಕರಾದ ಜಗದೀಶ್ ಮೀಯಾರುಪಲ್ಕೆ ಪ್ರಮುಖರಾದ ಚಂದ್ರ ಕೈಯಾಳ, ಶಿವರಾಜ್ ಮಜಲು, ಪ್ರಕಾಶ್ ಕೊಟ್ಟುಂಜ ಮತ್ತಿತರರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top