ಮೂರು ಕ್ಷೇತ್ರದಲ್ಲೂ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌

ಶಿಗ್ಗಾವಿಯಲ್ಲಿ ಪಠಾಣ್‌, ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ, ಸಂಡೂರಿನಲ್ಲಿ ಅನ್ನಪೂರ್ಣ ಜಯಭೇರಿ

ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. 































 
 

ಸುಮಾರು 09 ಸಾವಿರ ಮತಗಳ ಅಂತರದಿಂದ ಪಠಾಟ್‌ ಗೆಲುವು ಪಡೆದುಕೊಂಡಿದ್ದಾರೆ. ಈ ಮೂಲಕ ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಭದ್ರಕೋಟೆ ಅಲುಗಾಡಿದೆ. ರಾಜ್ಯ ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ ಬಾಕಿಯಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್‌ ಆದರೂ ಜನತೆ ಯೋಗೇಶ್ವರ್‌ ಕೈಹಿಡಿದಿದ್ದಾರೆ. ಮೊದಲ 6 ಸುತ್ತಿನಲ್ಲಿ ನಿಖಿಲ್‌ ಕುಮಾರ ಸ್ವಾಮಿ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು. ನಿಖಿಲ್‌ ಕುಮಾರಸ್ವಾಮಿ 73417 ಮತಗಳನ್ನ ಪಡೆದಿದ್ದರೇ ಸಿಪಿ ಯೋಗೇಶ್ವರ್‌ 99320 ಮತಗಳನ್ನ ಪಡೆದಿದ್ದಾರೆ. ಯೋಗೇಶ್ವರ್‌ 25903 ಮತಗಳ ಮೂಲಕ ಮುನ್ನಡೆಯನ್ನ ಸಾಧಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top