ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ದಿ.ಜಿ.ಎಲ್.ಆಚಾರ್ಯರ ಜನ್ಮಶತಾಬ್ಧಿ ಹಾಗೂ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ‘ಗ್ಲೋವಿಂಗ್100’ ರ ಡ್ರಾ ಸಮಾರಂಭ ನಡೆಯಿತು.

ಅ.31 ರಿಂದ ನ.13 ರ ತನಕ ಹಮ್ಮಿಕೊಂಡ ಈ ವಿಶೇಷ ಕೊಡುಗೆಯಲ್ಲಿ ಪ್ರತೀ ಖರೀದಿಗೂ ಆಕರ್ಷಕ ಉಚಿತ ಉಡುಗೊರೆ ಹಾಗೂ ಚಿನ್ನದ ನೆಕ್ಲೇಸ್ ನ್ನು ಬಂಪರ್ ಬಹುಮಾನವಾಗಿ ಇಡಲಾಗಿತ್ತು.
ದರ್ಬೆ ಯುಮುನಾ ಬೋರ್ ವೆಲ್ ನ ಮಾಲಕಿ ದಿವ್ಯಾ ಕೆ. ಶೆಟ್ಟಿ ಬಂಪರ್ ಬಹುಮಾನದ ಡ್ರಾವನ್ನು ನಡೆಸಿಕೊಟ್ಟರು. ಹರೀಶ್ ಲೋಲಾಕ್ಷಿ ಕನಕಮಜಲು ಬಂಪರ್ ಬಹುಮಾನ ಚಿಕ್ಕದ ನೆಕ್ಲೆಸ್ ವಿಜೇತರಾದರು.
ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯ ಮಾಲಕ ಜಿ.ಎಲ್.ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ ಉಪಸ್ಥಿತರಿದ್ದರು.