ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆ, ನಾಯಕತ್ವ ಕುರಿತು ತರಬೇತಿ

ಪುತ್ತೂರು: ಶಿಕ್ಷಣ ಪೌಂಡೇಶನ್ ಸಂಸ್ಥೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ  ಒಂದು ದಿನದ ಡಿಜಿಟಲ್ ಸಾಕ್ಷರತೆ ಹಾಗೂ ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಗಳನ್ನೊಳಗೊಂಡ  ತರಬೇತಿಯನ್ನು ಪುತ್ತೂರು ತಾಲೂಕು ಪಂಚಾಯತ್  ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಭಾರತಮಾತೆ ಹಾಗೂ ಗ್ರಂಥಾಲಯ ಪಿತಾಮಹ ಎಸ್. ಆರ್. ರಂಗನಾಥನ್ ರವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆಯ ಅಗತ್ಯತೆಯ ಬಗ್ಗೆ ಹಾಗೂ ಈ ತರಬೇತಿಯಿಂದಾಗುವ ಸಕಾರತ್ಮಕ ಪರಿಣಾಮಗಳ ಬಗ್ಗೆ ತಿಳಿಸಿದರು. ಶಿಕ್ಷಣ ಫೌಂಡೇಶನ್ ವತಿಯಿಂದ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಿಗೆ  ಅನೇಕ ರೀತಿಯ ಡಿಜಿಟಲ್ ಸಾಧನಗಳನ್ನು ಒದಗಿಸಿದ್ದು, ಅವುಗಳ ಸಹಾಯದಿಂದ  ಗ್ರಾಮೀಣ ಭಾಗದ ಸಮುದಾಯದ ಜನರು ಡಿಜಿಟಲ್ ಸಾಕ್ಷರರಾಗಬೇಕು. ಈ ಮೂಲಕ ತಮ್ಮ ದೈನಂದಿನ ಉದ್ಯೋಗ, ವ್ಯವಹಾರಗಳಲ್ಲಿ, ಸದೃಢರಾಗಬೇಕು ಎಂದರು.

ಶಿಕ್ಷಣ ಫೌಂಡೇಶನ್ ಉಡುಪಿ ಜಿಲ್ಲಾ ಸಂಯೋಜಕಿ ರೀನಾ ಹೆಗಡೆ, ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಸುಮತಿ ಡಿಜಿಟಲ್ ಸಾಕ್ಷರತೆ ಮತ್ತು ನಾಯಕತ್ವ ಕುರಿತು ತರಬೇತಿ ನಡೆಸಿಕೊಟ್ಟರು.































 
 

ಪುತ್ತೂರು ತಾಲೂಕು ಪಂಚಾಯಿತಿ ಗ್ರಂಥಾಲಯ ವಿಷಯ ನಿರ್ವಾಹಕ ಶೇಖ್ ಖಲಂದರ್ ಅಲಿ, ಶಿಕ್ಷಣ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕ ಲವೀಶ್ ಕುಮಾರ್, ತಾಲ್ಲೂಕು ಸಂಯೋಜಕಿ ದಾಕ್ಷಾಹಿಣಿ ಉಪಸ್ಥಿತರಿದ್ದರು.

ಬಲ್ನಾಡು ಗ್ರಾಪಂ ಅರಿವು ಕೇಂದ್ರದ ಮೇಲ್ವಿಚಾರಕಿ ಸುಜಾತ ಸ್ವಾಗತಿಸಿದರು. ಬೆಟ್ಟಂಪಾಡಿ ಅರಿವು ಕೇಂದ್ರ ಮೇಲ್ವಿಚಾರಕಿ ಪ್ರೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಸವಣೂರು ಅರಿವು ಕೇಂದ್ರದ ಮೇಲ್ವಿಚಾರಕಿ ಶಾರದಾ ವಂದಿಸಿದರು. 64 ಅರಿವು ಕೇಂದ್ರಗಳ ಮೇಲ್ವಿಚಾರಕರು ತರಬೇತಿಯ ಸದುಪಯೋಗ ಪಡೆದುಕೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top