ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ “INFOTSAV 2K24” ಸಮಾರೋಪ ಸಮಾರಂಭ

ಸವಣೂರು:  ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ “INFOTSAV 2K24”  ಸಮಾರೋಪ ಸಮಾರಂಭ ಗುರುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ವಹಿಸಿ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶುಭ ಹಾರೈಸಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಗಳಾಗಲು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಸ್ಪರ್ಧೆ ತರಬೇತಿಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತದೆ ಎಂದರು.

ಮುಖ್ಯಅತಿಥಿಯಾಗಿ ಬೆಳ್ಳಾರೆ ಆರಕ್ಷಕ ಠಾಣೆಯ ಸಬ್‌ ಇನ್‌ ಸ್ಪೆಕ್ಟರ್ ಹೀರಯ್ಯ ಡಿ.ಎನ್. ಮಾತನಾಡಿ, ನೀವೆಲ್ಲರೂ ಉತ್ತಮರ ಸ್ನೇಹ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರಿ. ಅಲ್ಲದೆ ಎಲ್ಲಾ ಸಂದರ್ಭದಲ್ಲಿ  ಸೃಜನಶೀಲರಾಗಿ ಇರಿ ಎಂದು ಹಾರೈಸಿದರು.



































 
 

ಇನ್ನೋರ್ವ ಮುಖ್ಯಅತಿಥಿ ಸುಳ್ಯ ಚೇಂಬರ್‌ ಆಫ್‌ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಪಿ.ಬಿ ಸುಧಾಕರ್‌ ರೈ ಮಾತನಾಡಿ, ನೀವು ಕಲಿಕೆಯ ಜತೆಗೆ ಸಂಸ್ಥೆಗೆ ಚಿರ ಋಣಿಗಳಾಗಬೇಕು. ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದರು.

ಪ್ರಗತಿ ಸಿ.ಬಿ. ಅತಿಥಿಗಳ ಪರಿಚಯ ಮಾಡಿದರು. ಬಿ.ಸಿ.ಎ ವಿಭಾಗದ ಮುಖ್ಯಸ್ಥೆ. ಪ್ರತಿಭಾ ಭಟ್‌ ಕಾರ್ಯಕ್ರಮದ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಮೂರ್ತಿ ಕೆ., ಉಪಪ್ರಾಂಶುಪಾಲ ಎಂ. ಶೇಷಗಿರಿಯವರು ಉಪಸ್ಥಿತರಿದ್ದರು.

ಸಂಘಟಕ ಅಶ್ಮಿತ್ ಎ.ಕೆ. ಸ್ವಾಗತಿಸಿ, ಸೋನಿಕಾ ಎಸ್.ಆರ್. ವಂದಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪ್ರಸನ್ನ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್ ನ್ನು ಪಡೆದುಕೊಂಡಿತು. ನಿಂತಿಕಲ್ಲು ಕೆ.ಎಸ್‌.ಗೌಡ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಲಕ್ಕಿ ಕೂಪನ್‌ ಡ್ರಾ ಮಾಡಲಾಯಿತು. ಲಕ್ಕಿ ಕೂಪನ್ ನ ವಿಜೇತರು ಪ್ರಥಮ 2561 ಹನೀಫ್ ಕುರ್ತಾಳ, ದ್ವಿತೀಯ 1565 ಸೂರ್ಯ ಹಾಗೂ ತೃತೀಯ 1677 ಕೆ.ಕೆ.ಜನರಲ್ ಸ್ಟೋರ್‌ ಅಂಕಜಾಲು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top