ಮಾರ್ಚ್​ 14ರಿಂದ ಮೇ 25ರ ತನಕ ಐಪಿಎಲ್‌ ಟೂರ್ನಿ

ಕ್ರಿಕೆಟ್‌ ಹಬ್ಬದ ವೇಳಾಪಟ್ಟಿ ಬಹಿರಂಗ

ಮುಂಬಯಿ : 18ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿ ಬಹಿರಂಗವಾಗಿದೆ. ಕ್ರೀಡಾ ವೆಬ್‌ಸೈಟ್‌ ಒಂದರಲ್ಲಿ ಮುಂದಿನ ಮೂರು ವರ್ಷಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಐಪಿಎಲ್‌ ಸಹಿತ ಪ್ರಮುಖ ಕ್ರೀಡಾಕೂಟಗಳ ನೇರ ಪ್ರಸಾರ ಮಾಡುವ ಇಎಸ್​ಪಿಎನ್ ಟಿವಿ ವಾಹಿನಿಗೆ ಸೇರಿದ ಇಎಸ್​ಪಿಎನ್ ಕ್ರಿಕ್​ಇನ್ಫೋ ಎಂಬ ವೆಬ್‌ಸೈಟ್‌ ಐಪಿಎಲ್‌ ವೇಳಾಪಟ್ಟಿಯನ್ನು ಬಹಿರಂಗಗೊಳಿಸಿದೆ. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಇಎಸ್​ಪಿಎನ್ ಕ್ರಿಕ್​ಇನ್ಫೋ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್​ 14ರಿಂದ ಆರಂಭವಾಗಲಿದ್ದು, ಮೇ 25ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಇದರ ಜೊತೆಗೆ ಮುಂದಿನ ಎರಡು ಆವೃತ್ತಿಗಳ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, 2026ರಲ್ಲಿ ಐಪಿಎಲ್ ಟೂರ್ನಿ ಮಾರ್ಚ್​ 15 ರಿಂದ ಮೇ 31ರವರೆಗೆ ನಡೆದರೆ, 2027ರ ಐಪಿಎಲ್ ಮಾರ್ಚ್​ 14ರಿಂದ ಮೇ 30ರವರೆಗೆ ನಡೆಯಲ್ಲಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳಿಗೆ ಬಿಸಿಸಿಐ, ಇ-ಮೇಲ್ ಮುಖಾಂತರ ವೇಳಾಪಟ್ಟಿ ರವಾವಿಸಿದೆ. ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾತ್ರ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಕಳೆದ ಮೂರು ಆವೃತ್ತಿಗಳಂತೆ ಮುಂದಿನ ಆವೃತ್ತಿಯಲ್ಲೂ 74 ಪಂದ್ಯಗಳು ನಡೆಯಲಿವೆ ಎಂದು ಇಎಸ್​ಪಿಎನ್ ಕ್ರಿಕ್​ಇನ್ಫೋ ಹೇಳಿಕೊಂಡಿದೆ.































 
 

ಇದಕ್ಕೂ ಮೊದಲು 2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದೆ. ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 574 ಆಟಗಾರರ ಬಿಡ್ಡಿಂಗ್ ನಡೆಯಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top