ಬೆಂಗಳೂರು: ಖಾಸಗಿ ವೀಡಿಯೊ ಇದೆ ಎಂದು ಬೆದರಿಸಿ ಕೇಂದ್ರ ಸರ್ಕಾರಿ ಊದ್ಯೋಗಿಯೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದ ಬೆಂಗಳೂರಿನ ಹನಿಟ್ರ್ಯಾಪ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ವಂಚನೆಗೊಳಗಾದ ವ್ಯಕ್ತಿಯನ್ನು ಆರ್‌ಟಿ ನಗರದ ಜಿಮ್ ಒಂದರಲ್ಲಿ ಆರೋಪಿ ತಬ್ಸಂ ಬೇಗಂ ಪರಿಚಯ ಮಾಡಿಕೊಂಡಿದ್ದಳು. ನಂತರದ ದಿನಗಳಲ್ಲಿ ಮಗು ಒಂದನ್ನು ದತ್ತು ಪಡೆದಿದ್ದೇನೆ ಎಂದು ಅವರಿಂದ ಸಹಾಯ ಪಡೆದಿದ್ದಳು. ಬಳಿಕ ವಾಟ್ಸಾಪ್ ಮೂಲಕ ಖಾಸಗಿ ಫೋಟೊ ಕಳಿಸಿ ಅವರನ್ನು ತಬ್ಸಂ ಗ್ಯಾಂಗ್ ಬೆದರಿಸಲಾರಂಭಿಸಿತ್ತು. ಪೊಲೀಸ್ ಹಾಗೂ ವಕೀಲ ಎಂದು ಹೇಳಿ ಹೆದರಿಸಿ, 2021ರಿಂದ ನಿರಂತರವಾಗಿ ಹಂತ ಹಂತವಾಗಿ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದರು.
ಈ ಸಂಬಂಧ 3 ವರ್ಷಗಳ ನಂತರ ಸಂತ್ರಸ್ತ ವ್ಯಕ್ತಿ ಸಿಸಿಬಿಗೆ ದೂರು ನೀಡಿದ್ದರು. ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.