ಸರಕಾರದಿಂದಲೇ ನಮಗೆ ನೇರವಾಗಿ ಸಂಬಳ ಸಿಗುವಂತಾಗಲಿ | ಘನತ್ಯಾಜ್ಯ ಘಟಕ ಸಿಬ್ಬಂದಿಗಳಿಂದ ಶಾಸಕ ಅಶೋಕ್ ರೈ ಗೆ ಮನವಿ

ಪುತ್ತೂರು: ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸರಕಾರದಿಂದಲೇ ನೇರವಾಗಿ ಸಂಬಳ ಸಿಗುವಂತೆ ಮಾಡಬೇಕು, ಈ ಬಗ್ಗೆ ಸಚಿವರು, ಸರಕಾರದ ಜೊತೆ ಮಾತುಕತೆ ನಡೆಸಬೇಕು ಎಂದು ಘನತ್ಯಾಜ್ಯ ಘಟಕದ ಸಿಬ್ಬಂದಿಗಳು ಪುತ್ತೂರು ಶಾಸಕ ಅಶೋಕ್ ರೈಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿಯಲ್ಲಿ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ದಿಶೆಯಲ್ಲಿ ಆರಂಭಗೊಂಡ ಘನತ್ಯಾಜ್ಯ ಘಟಕದ ಮಹಿಳಾ ಸಿಬ್ಬಂದಿ ಮಹಿಳಾ ಚಾಲಕರು ಹಾಗೂ ನಿರ್ವಾಹಕರಾಗಿ ಆಯ್ಕೆಗೊಂಡು ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕದಲ್ಲಿ ಚಾಲಕಿಯರು ಹಾಗೂ ನಿರ್ವಾಹಕರಾಗಿ ದುಡಿಯುತ್ತಿದ್ದು, ದಿನಕೂಲಿ ನೌಕರರಾಗಿರುತ್ತೇವೆ. ಘಟಕವು ಗ್ರಾಮ ಪಂಚಾಯತ್ ಕೆಳಗೆ ನಿರ್ವಹಣೆ ಮಾಡುತ್ತಿದ್ದು, ತದನಂತರ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಕೆಲಸದ ಮೇಲುಸ್ತುವಾರಿಯನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ನಿರ್ವಹಿಸುತ್ತಲಿದೆ.  ಗ್ರಾಮ ಪಂಚಾಯತ್‌ಗೆ ಹಣಕಾಸು ಯೋಜನೆಯಡಿ ನೆರವು ಬಾರದೆ ಇದ್ದಲ್ಲಿ ನಮಗೆ ಅಂತರ್ನಿಧಿ ಕೊಡಮಾಡಲು ಆಗುವುದಿಲ್ಲ. ಈ ಜಾರಣಕ್ಕೆ ನಮಗೆ ಸರಿಯಾಗಿ ಗೌರವ ಧನ ಕೂಡಾ ಸಿಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 ಬೇಡಿಕೆಗಳು:







































 
 

ಸರಕಾರದಿಂದ ಬರುವ ವೇತನ ಹಾಗೂ ಸೌಲಭ್ಯಗಳು ದೊರೆಯಬೇಕು, ನಮ್ಮ ಕೆಲಸ ತಾತ್ಕಾಲಿಕವಾಗಿದ್ದು, ಅದನ್ನು ಶಾಶ್ವತವಾಗಿ ಮಾರ್ಪಾಡು ಮಾಡಬೇಕು, ವಾರಕ್ಕೆ ೧-೨ ಕೆಲಸ ನೀಡುವ ಬದಲು ತಿಂಗಳು ಪೂರ್ತಿ ಕೆಲಸ ನೀಡಬೇಕು,  ಚಾಲಕಿ ಮತ್ತು ನಿರ್ವಾಹಕರಿಗೆ ಸಮಾನ ವೇತನ ನಿಗಧಿಪಡಿಸುವುದು, ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಏಕರೂಪ ವೇತನ ಹಾಗೂ ಕೆಲಸ ನಿಗಧಿಪಡಿಸುವುದು, ಅಗತ್ಯ ತುರ್ತು ಚಿಕಿತ್ಸಾ ಸೌಲಭ್ಯ, ಆರೋಗ್ಯ, ಶುಚಿತ್ವ, ಸ್ವಚ್ಛತೆ ಬಗ್ಗೆ ಗಮನ ಹರಿಸುವುದು. ಮೇಲ್ವಿಚಾರಕರ ಅಗತ್ಯತೆ ಇರುವುದರಿಂದ ಅವರನ್ನು ಗೊತ್ತು ಮಾಡುವುದು ಹಾಗೂ ಅವರಿಗೂ ಗೌರವಧನ ನಿಗಧಿಪಡಿಸುವುದು,

 ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಒಣಕಸ ನೀಡದಿರುವವರ ಹಾಗೂ ಸ್ವಚ್ಛತಾ ಸೇವಾ ಶುಲ್ಕ ಪಾವತಿಸದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರೆ ಬೇಡಿಕೆಯನ್ನು ಸರಕಾರದ ಮುಂದಿರಿಸಿದ್ದಾರೆ. ಈ ಸಂದರ್ಭದಲ್ಲಿ ದೀಪ್ತಿ, ಸಲ್ವಿನ್, ಅರುಣಾ, ಚೇತನಾ, ದೀಪಿಕಾ , ಪ್ರವೀಣಾ, ಗಿರಿಜಾ, ಚಂದ್ರವತಿ, ಕಮಲ, ಸುಮತಿ, ಯಶೋಧಾ, ಸೌಮ್ಯಾ, ಗೀತಾ, ಪುಷ್ಪ, ರೇವತಿ, ಬೇಬಿ ಮತ್ತಿತರರು ಉಪಸ್ತಿತರಿದ್ದರು.

 ನಾವು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಮಾಡುವ ಮೂಲಕ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ನಮಗೆ ವಾರದಲ್ಲಿ ಒಂದು ಕೆಲಸವೂ ಸರಿಯಾಗಿ ಸಿಗುತ್ತಿಲ್ಲ. ಕೆಲವರು ಕಸವನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಶುಲ್ಕ ಸಂಗ್ರಹವೂ ಸರಿಯಾಗಿ ಆಗುತ್ತಿಲ್ಲ, ನಮ್ಮ ಗೌರವಧನವೂ ಸಮರ್ಪಕವಾಗಿ ದೊರೆಯದ ಕಾರಣ ನಾವು ತುಂಬ ಕಷ್ಟದಲ್ಲಿದ್ದೇವೆ. ಸರಕಾರದಿಂದಲೇ ನಮಗೆ ನೇರ ವೇತನ ಪಾವತಿಯಾಗುವಂತಾಗಬೇಕು ಇದಕ್ಕಾಗಿ ಶಾಸಕರಿಗೆ ಮನವಿಯನ್ನು ನೀಡಿದ್ದೇವೆ, ಸಕಾರಾತ್ಮಕವಾಗಿ ಶಾಸಕರು ಸ್ಪಂದಿಸಿದ್ದಾರೆ.

  • ಚೇತನ, ಬಲ್ನಾಡು ಗ್ರಾಪಂ ತ್ಯಾಜ್ಯ ಘಟಕ ಸಿಬ್ಬಂದಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top