ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ

ಭಾರಿ ಪೈಪೋಟಿಗೆ ವೇದಿಕೆಯಾದ ಎರಡು ರಾಜ್ಯಗಳ ಚುನಾವಣೆ

ಮುಂಬಯಿ : ಮಹಾರಾಷ್ಟ್ರದ ಎಲ್ಲ 288 ಮತ್ತು ಮತ್ತು ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆಯೂ ನಡೆಯುತ್ತಿದೆ.

ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ ಜೊತೆಗೆ ಉತ್ತರಾಖಂಡ್ (ಒಂದು ಸ್ಥಾನ), ಪಂಜಾಬ್ (ನಾಲ್ಕು ಸ್ಥಾನಗಳು) ಮತ್ತು ಕೇರಳ (ಒಂದು ಸ್ಥಾನ)ಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.ಇದರೊಂದಿಗೆ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದೆ.







































 
 

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಡುವಿನ ಒಡಕು ನಂತರ ಒಟ್ಟು 158 ಪಕ್ಷಗಳು ಚುನಾವಣಾ ಕಣದಲ್ಲಿವೆ.
ಜಾರ್ಖಂಡ್ ಚುನಾವಣೆಯ ಎರಡನೇ ಹಂತದಲ್ಲಿ, 38 ಸ್ಥಾನಗಳಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಭಾರತ ಮೈತ್ರಿಕೂಟ ಮತ್ತು ಎನ್‌ಡಿಎ ನಡುವೆ ಪೈಪೋಟಿ ಇದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಜಾರ್ಖಂಡ್​ನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ, ಇಲ್ಲಿ ಆಡಳಿತಾರೂಢ ಇಂಡಿಯಾ ಬ್ಲಾಕ್ ಮತ್ತು ಎನ್‌ಡಿಎ ನಡುವೆ ಪೈಪೋಟಿ ಏರ್ಪಟ್ಟಿದೆ. ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳ ಪೈಕಿ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ತುಸು ಹಿನ್ನಡೆ ಅನುಭವಿಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ನಂತರ ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಲೋಕಸಭೆಯ ಸೋಲು ಹಿನ್ನಡೆ ತಾತ್ಕಾಲಿಕ ಎಂದು ಸಾಬೀತುಪಡಿಸಿದೆ. ಹೀಗಾಗಿ ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಗೆದ್ದರೆ ಬಿಜೆಪಿಯ ತಾತ್ಕಾಲಿಕ ಹಿನ್ನಡೆ ವಾದಕ್ಕೆ ಬಲ ಬರಲಿದೆ. ಇನ್ನೊಂದೆಡೆ ಲೋಕಸಭಾ ಚುನಾವಣೆಯಲ್ಲಿ ತುಸು ಚೇತರಿಸಿಕೊಂಡು ಬೀಗುತ್ತಿದ್ದ ಕಾಂಗ್ರೆಸ್‌ ನೇತೃತ್ವದ ಇಂಡಿ ಮೈತ್ರಿಕೂಟ ಹರ್ಯಾಣದಲ್ಲಿ ಸೋತು ಹೋಗಿದ್ದು, ಲೋಕಸಭೆ ಗೆಲುವು ಆಕಸ್ಮಿಕ ಎಂಬ ಭಾವನೆಯಿದೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ಇಂಡಿ ಮೈತ್ರಿಕೂಟಕ್ಕೆ ಈ ಎರಡು ರಾಜ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top