ಪುತ್ತೂರು: 1.S.S Science and Technology University ಜಯಚಾಮರಾಜೇಂದ್ರ ಕಾಲೇಜು ಆಫ್ ಇಂಜಿನಿಯರಿಂಗ್ ಮೈಸೂರು ಸಂಸ್ಥೆಯ “POLYMER SCIENCE AND TECHNOLOGY” ವಿಭಾಗದ ವತಿಯಿಂದ ನ.16ರಂದು YUDO ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬೈ ಪ್ರಾಯೋಜಕತ್ವದಲ್ಲಿ “YUDO Best Polymer Technocrat Award 2024” ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮೈಸೂರಿನ ಜೆಎಸ್ ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯುನಿವರ್ಸಿಟಿಯಲ್ಲಿ ನಡೆಯಿತು.
ಹಿರಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸಿ ಈ ಸಂಸ್ಥೆಯು ಸತತ ಮೂರು ವರ್ಷಗಳಿಂದ ಪ್ರಶಸ್ತಿಯನ್ನು ನೀಡಿಕೊಂಡು ಬಂದಿದ್ದು ಈ ಸಲದ 4ನೇ ಬಾರಿಯ ಪ್ರಶಸ್ತಿಯನ್ನು Ex Engineering Manager, Airbus Australia, ಪ್ರಸ್ತುತ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಯವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ YUDO HotRunner India Pvt.Ltd., Mumbai ಇದರ ಅಧ್ಯಕ್ಷ ವಿಶಾಲ್ ಅಗರ್ವಾಲ್, J.S.S.STU ಮೈಸೂರಿನ ಉಪ ಕುಲಪತಿಗಳಾದ ಡಾ.ಎ.ಯನ್ ಸಂತೋಷ್ ಕುಮಾರ್, J.S.S.STU ಮೈಸೂರಿನ ಕುಲಸಚಿವರಾದ ಡಾ.ಎಸ್.ಎ.ಧನರಾಜ್, ಮೈಸೂರು ಶ್ರೀ ಜಯಚಾಮರಾಜೇಂದ್ರ ಕಾಲೇಜು ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲ ಡಾ.ಸಿ.ನಟರಾಜು ಉಪಸ್ಥಿತರಿದ್ದರು.