ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪಿಯು ಫೆಸ್ಟ್ “ಅಟೆರ್ನಸ್-2024” ಯಶಸ್ವಿ ಸಮಾಪನ | ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು  ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್-2024 ಅಕ್ಷಯ ಕಾಲೇಜಿನಲ್ಲಿ ಉದ್ಘಾಟನೆಗೊಂಡು ಯಶಸ್ವಿಯಾಗಿ ಸಮಾಪನಗೊಂಡಿತು.

ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್ ಎನಿಸಿಕೊಂಡಿದ್ದು, ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸ್ಪರ್ಧೆಗಳಾದ ಗ್ರೂಪ್ ಸಿಂಗಿಂಗ್, ಸೋಲೊ ಸಿಂಗಿಂಗ್, ಸೋಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್, ಮೊಡೆಲ್ ಪ್ರೆಸೆಂಟೇಶನ್, ಜಾಹಿರಾತು, ಪಾಟ್ ಡೆಕೋರೇಶನ್, ಬೆಂಕಿಯಿಲ್ಲದ ಅಡುಗೆ, ಕ್ವಿಜ್, ವೆಲ್ತ್ ಔಟ್ ಆಫ್ ವೇಸ್ಟ್, ಪೆನ್ಸಿಲ್ ಸ್ಕೆಚ್, ಫಿಚ್ಚರ್ ಸ್ಟೋರಿ ರೈಟಿಂಗ್-ಕನ್ನಡ, ಫಿಚ್ಚರ್ ಕವನ ರೈಟಿಂಗ್-ಇಂಗ್ಲೀಷ್, ಮಿ. ಆಂಡ್ ಮಿಸೆಸ್ ಅಟೆರ್ನಸ್, ಫೇಸ್ ಆಫ್ ಅಟೆರ್ನಸ್ ಹೀಗೆ ಹದಿನೈದು ವಿಭಾಗಗಳಲ್ಲಿ ಸ್ಪರ್ಧೆಗಳು ಏರ್ಪಡಿಸಲಾಗಿದ್ದು, ಸುಮಾರು ೩೧ ಕಾಲೇಜುಗಳಿಂದ ೬೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸುಕದಿಂದ ಭಾಗವಹಿಸಿದ್ದಾರೆ.

ಮುಖ್ಯ ಅತಿಥಿ, ರೋಟರಿ 3181ರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಅಂಕಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ಮಿಂಚಬೇಕು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅನಾವರಣಗೊಳಿಸಲು ವೇದಿಕೆ ನಿರ್ಮಿಸಬೇಕು. ಏವಿಯೇಶನ್, ಫ್ಯಾಷನ್ ಡಿಸೈನಿಂಗ್, ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸುಗಳನ್ನು ದೊಡ್ಡ ದೊಡ್ಡ ನಗರಗಳಲ್ಲಿ ಆಯೋಜನೆ ಮಾಡುತಿದ್ದರೂ ಇಲ್ಲಿನ ಅಕ್ಷಯ ಕಾಲೇಜು ಗ್ರಾಮಾಂತರ ಪ್ರದೇಶದಲ್ಲಿ ಅಂತಹ ಕೋರ್ಸುಗಳನ್ನು ಪರಿಚಯಿಸಿರುವುದು ಉಲ್ಲೇಖನೀಯ. ವಿದ್ಯಾರ್ಥಿಗಳಿಗೆ ಪಿಯುಸಿ ಬಳಿಕ ಅಂಕಗಳ ಬಗ್ಗೆ ಚಿಂತೆ ಮಾಡದೆ ತನ್ನ ಪ್ರೊಫೆಷನಲ್ ಬಗ್ಗೆ ಅರಿಯುವವರಾಗಬೇಕು ಎಂದರು.































 
 

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಅವಕಾಶಗಳು ಸಿಕ್ಕಿದಾಗ ಅವನ್ನು ಧನಾತ್ಮಕವಾಗಿ ಬಳಸಿಕೊಳ್ಳುವ ಚಾತುರ್ಯತೆ ವಿದ್ಯಾರ್ಥಿಗಳು ಹೊಂದಬೇಕು. ಆಧುನಿಕ ಯುಗದಲ್ಲಿ ಅನೇಕ ಸವಾಲುಗಳಿದ್ದು ಅವನ್ನು ಮೆಟ್ಟಿ ನಿಲ್ಲುವ ಚತುರತೆ ನಮ್ಮದಾಗಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ, ಗೆಲ್ಲುವ ಪ್ರಯತ್ನದೊಂದಿಗೆ ಮುಂದೆ ಸಾಗಿ ಎಂದರು.

ಕಾಲೇಜಿನ ಚೇರ್‍ ಮ್ಯಾನ್‍ ಜಯಂತ ನಡುಬೈಲು ಮಾತನಾಡಿ, ನಮ್ಮ ಕಾಲೇಜಿಗೆ ವಿದ್ಯಾರ್ಜನೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ದೊರಕಿಸಿಕೊಡಬೇಕು ಮಾತ್ರವಲ್ಲ ಸಮಾಜದಲ್ಲಿ ಉತ್ತಮ ಬದುಕನ್ನು ಬದುಕಬೇಕು ಎನ್ನುವುದು ಉದ್ಧೇಶವಾಗಿದೆ. ಕೇವಲ ಕಲಿಕೆ ಮಾತ್ರವಲ್ಲ, ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಕೌಶಲ್ಯವನ್ನು ಓರೆಗೆ ಹಚ್ಚಬೇಕು ಎನ್ನುವ ನಿಟ್ಟಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದರು.

ವಿಭಾಗವಾರು ಫಲಿತಾಂಶ:

ಸೋಲೊ ಡ್ಯಾನ್ಸಿಂಗ್-ನಂದನ್, ವಾಣಿ ಪಿಯು ಬೆಳ್ತಂಗಡಿ(ಪ್ರ), ತ್ರಿಶಾ ಕೆ.ಬಿ, ಫಿಲೋಮಿನಾ ಕಾಲೇಜು(ದ್ವಿ), ಶ್ರೇಯಾ ಎಂ.ಜಿ,ಎನ್‌ಎಂಸಿ ಸುಳ್ಯ(ತೃ), ಸೋಲೊ ಸಿಂಗಿಂಗ್-ಪ್ರಥನಾ, ಫಿಲೋಮಿನಾ ಕಾಲೇಜು(ಪ್ರ), ಸಿಂಚನಾ, ವಾಣಿ ಪಿಯು ಕಾಲೇಜು(ದ್ವಿ), ಜಶ್ಮಿತಾ, ಮದೆ ಮದೇಶ್ವರ ಕಾಲೇಜು(ತೃ), ಪೆನ್ಸಿಲ್ ಸ್ಕೆಚ್-ಸುದರ್ಶನ್, ವಾಣಿ ಪಿಯು ಕಾಲೇಜು(ಪ್ರ), ಪ್ರೀತಲ್ ಡಿ.ವಿ, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು(ದ್ವಿ), ತೇಜಸ್ ಕೆ.ವಿ, ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜು(ತೃ), ಪಾಟ್ ಡೆಕೋರೇಶನ್-ಅನನ್ಯ, ವಾಣಿ ಪಿಯು ಕಾಲೇಜು(ಪ್ರ), ಶ್ರುದ್ಧಿ ಎನ್.ಎ, ಕೆ.ಎಸ್ ಗೌಡ ಕಾಲೇಜು(ದ್ವಿ), ನಾಝಿಯಾ, ಕುಂಬ್ರ ಮರ್ಕಝುಲ್ ಹುದಾ ಕಾಲೇಜು(ತೃ), ಫಿಚ್ಚರ್ ಸ್ಟೋರಿ ರೈಟಿಂಗ್ ಕನ್ನಡ-ಶ್ರುತಿ ಕೆ.ಎಸ್, ಸುಳ್ಯ ಶ್ರೀ ಶಾರದಾ ಕಾಲೇಜು(ಪ್ರ), ಅಶ್ನಝೆಯ, ಸುಳ್ಯ ಗಾಂಧಿನಗರ ಸರಕಾರಿ ಕಾಲೇಜು(ದ್ವಿ), ಅನ್ವಿತಾ ಯು.ಎ, ಅರಂತೋಡು ಎನ್‌ಎಂಸಿ ಕಾಲೇಜು, ಫಿಚ್ಚರ್ ಕವನ ರೈಟಿಂಗ್ ಇಂಗ್ಲೀಷ್-ಆಯಿಶತ್ ಆಸ್ಮಾ, ಎನ್‌ಎಂಸಿ ಸುಳ್ಯ(ಪ್ರ), ಅವಿನ್ ಡಾಯಸ್, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು(ದ್ವಿ), ಆಯಿಶಾ ಸುಹಾನಾ, ಮರ್ಕಝುಲ್ ಹುದಾ ಪಿಯು ಕಾಲೇಜು(ತೃ), ಮಾಡೆಲ್ ಪ್ರೆಸೆಂಟೇಶನ್-ಫಿಲೋಮಿನಾ(ಪ್ರ), ವಾಣಿ ಪಿಯು ಕಾಲೇಜು(ದ್ವಿ), ಕೊಡಗು ಎಸ್‌ಎಂಎಸ್ ಕಾಲೇಜು(ತೃ), ವೆಲ್ತ್ ಔಟ್ ಆಫ್ ವೇಸ್ಟ್-ಆಯಿಶಾ ಕಾಲೇಜು ಆತೂರು(ಪ್ರ), ಫಿಲೋಮಿನಾ(ದ್ವಿ), ಸುಳ್ಯ ಕೆ.ಎಸ್ ಗೌಡ ಕಾಲೇಜು(ತೃ), ಬೆಂಕಿಯಿಲ್ಲದ ಅಡುಗೆ-ಆಯಿಶತ್ ಮುಫೈದ್/ಫಾತಿಮಾ ಆಫ್ನಾ, ಸರಕಾರಿ ಕಾಲೇಜು ಪಡ್ರೆ(ಪ್ರ), ಆಶಿಕಾ ಎ.ಜಿ/ಪ್ರಜ್ಞಾ, ನಿಂತಿಕಲ್ಲು ಕೆ.ಎಸ್.ಜಿ ಕಾಲೇಜು(ದ್ವಿ), ಸುಹೈಲಾ/ಸಾದಿಯಾ, ಆತೂರು ಆಯಿಶಾ ಕಾಲೇಜು(ತೃ), ಕ್ವಿಜ್-ವಾಣಿ ಪಿಯು(ಪ್ರ), ಸುಳ್ಯ ಎನ್‌ಎಂಸಿ(ದ್ವಿ), ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು(ತೃ), ಜಾಹಿರಾತು-ವಾಣಿ ಪಿಯು(ಪ್ರ), ಸುಳ್ಯ ಎನ್‌ಎಂಸಿ(ದ್ವಿ), ಕುಂಬ್ರ ಮರ್ಕಝುಲ್ ಹುದಾ(ತೃ), ಸಮೂಹ ಗಾಯನ-ವಾಣಿ ಪಿಯು(ಪ್ರ), ಕಡಬ ಸೈಂಟ್ ಜೋಕಿಂ(ದ್ವಿ), ಮದೆನಾಡು ಮದೆ ಮದೇಶ್ವರ(ತೃ), ಸಮೂಹ ನೃತ್ಯ-ಮೇಘಶ್ರೀ ಮತ್ತು ತಂಡ, ನಿಂತಿಕಲ್ ಕೆ.ಎಸ್ ಗೌಡ ಕಾಲೇಜು(ಪ್ರ), ಮನ್ವಿತಾ ಮತ್ತು ತಂಡ, ವಾಣಿ ಪಿಯು ಕಾಲೇಜು(ದ್ವಿ), ಭೂಮಿಕಾ ಮತ್ತು ತಂಡ, ಎನ್‌ಎಂಸಿ ಸುಳ್ಯ(ತೃ), ಫೇಸ್ ಆಫ್ ಅಟೆರ್ನಸ್-ವಿಖ್ಯಾತ್ ಗೌಡ, ನಿಂತಿಕಲ್ ಕೆ.ಎಸ್ ಗೌಡ ಕಾಲೇಜು(ಪ್ರ), ಮಿ.ಅಟೆರ್ನಸ್-ಹಾಶಿಮ್, ಫಿಲೋಮಿನಾ(ವಿನ್ನರ್), ಸ್ಟೆರೀನ್, ಸೈಂಟ್ ಜೋಕಿಂ ಕಡಬ(ರನ್ನರ್), ಮಿಸ್.ಅಟೆರ್ನಸ್-ಗ್ರೀಶ್ಮಾ, ಅರಂತೋಡು ಎನ್‌ಎಂಪಿಯುಸಿ(ಪ್ರ), ನಾಫಿಯಾ, ಫಿಲೋಮಿನಾ(ರನ್ನರ್ಸ್) ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತಾರೆ. 

ಕಾಲೇಜು ಪ್ರಾಂಶುಪಾಲ ಸಂಪತ್ ಪಕ್ಕಳರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ರಾಕೇಶ್ ಕೆ.ಸ್ವಾಗತಿಸಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಪಿ.ವಿ ನಾರಾಯಣ್, ಉದ್ಯಮಿ ಇಬ್ರಾಹಿಂ ಗೋಳಿಕಟ್ಟೆ, ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾಲೇಜು ವ್ಯವಸ್ಥಾಪಕಿ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಉಪ ಪ್ರಾಂಶುಪಾಲ ರಕ್ಷಣದ ಟಿ.ಆರ್, ವಿದ್ಯಾರ್ಥಿ ಸಂಘದ ನಾಯಕ ಜೀವನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶೃತಾ ರೋಟರಿ ಜಿಲ್ಲಾ ಗವರ್ನರ್‌ರವರ ಪರಿಚಯ ಮಾಡಿದರು. ಉಪನ್ಯಾಸಕ ಅಶೋಕ್ ರೈ ವಂದಿಸಿದರು. ಉಪನ್ಯಾಸಕಿ ದೀಪ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.

ಉತ್ತಮ ಕಾಲೇಜು, ಕಾರ್ಯಕ್ರಮವು ಎಲ್ಲವೂ ನೀಟಾಗಿ, ಕ್ರಮಬದ್ಧವಾಗಿ ಸಂಯೋಜನೆ ಮಾಡಿರುವುದು ಖುಶಿ ತಂದಿದೆ. ಇಲ್ಲಿನ ಉಪನ್ಯಾಸಕರ ತಂಡವಾಗಲಿ, ವಿದ್ಯಾರ್ಥಿಗಳಾಗಲಿ ನಮಗೆ ಒಳ್ಳೆಯ ಆತಿಥ್ಯವನ್ನು ನೀಡಿದ್ದಾರೆ. ಹೊರ ಜಿಲ್ಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಸುವರ್ಣಾವಕಾಶವಾಗಿದ್ದು ಎಲ್ಲವೂ ಉತ್ತಮವೆನಿಸಿದೆ.

  • ಅಮೃತಾ, ವಿದ್ಯಾರ್ಥಿನಿ, ಎನ್‌ಎಂಪಿಯುಸಿ ಆರಂತೋಡು
  • ಮಾಧವ ಎ.ಬಿ, ಸ್ಟಾಫ್, ಮದೆನಾಡು ಮದೆಮಹೇಶ್ವರ ಕಾಲೇಜು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top