ನೂತನವಾಗಿ ಆರಂಭಗೊಂಡ ದ.ಕ.ಜಿಲ್ಲಾ ಒಕ್ಕಲಿಗ ಸೇವಾವಾಹಿನಿಯಿಂದ ಸಹಾಯಾರ್ಥ ಕಾರ್ಯಕ್ರಮ | ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ನೆರವಿನ ಹಸ್ತ ಯೋಜನೆಗೆ ಚಾಲನೆ

ಪುತ್ತೂರು: ಸಮಾನ ಮನಸ್ಕ ಒಕ್ಕಲಿಗ ಯುವಕರು ಸಮಾಜದ ಕಡುಬಡತನ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆಯ ನೆರವಾಗುವ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ದ.ಕ. ಒಕ್ಕಲಿಗ ಗೌಡ ಸೇವಾವಾಹಿನಿ, ಕರ್ನಾಟಕ ಟ್ರಸ್ಟ್ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ  ನೀಡಲಾಯಿತು.

ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಿದರು.

ಒಕ್ಕಲಿಗ ಸಮಾಜದ ಬಂಟ್ವಾಳ ತಾಲೂಕಿನ ವಿಟ್ಲ ಮುನ್ನೂರು ಗ್ರಾಮದ ಆಲಂಗಾರು ನಿವಾಸಿ ಪಾಂಬಾರು ತೀರ್ಥರಾಮ ಗೌಡರ ಮನೆಯು ಕಳೆದ ಬಾರಿಯ ಮಳೆಗಾಲದಲ್ಲಿ ಬಾರಿ ಮಳೆಗೆ ನೆಲಸಮ ಆಗುವ ಹಂತದಲ್ಲಿದ್ದು ಪ್ರಸ್ತುತ ಆ ಮನೆಯಲ್ಲಿ ವಾಸ ಮಾಡಲು ಅಸಾಧ್ಯವಾಗಿದ್ದು, ಅವರಿಗೆ ನೂತನ ಮನೆ ನಿರ್ಮಾಣಕ್ಕೆ ಕೆಂಪುಕಲ್ಲನ್ನು ಸೇವಾ ವಾಹಿನಿಯು ನೀಡಲು ಮುಂದಾಗಿದ್ದು ಅದರಂತೆ 2500 ಕೆಂಪುಕಲ್ಲನ್ನು ನೂತನ ಮನೆ ನಿವೇಶನಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.







































 
 

ಒಕ್ಕಲಿಗ ಸಮಾಜದ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ಸಮಾನಮನಸ್ಕ ದಾನಿಗಳ ನೆರವಿನೊಂದಿಗೆ ತಲಾ 6000 ರೂಪಾಯಿಗಳ ಸಹಾಯಹಸ್ತದ ಸಂಗ್ರಹದೊಂದಿಗೆ ಸೇವಾ ವಾಹಿನಿ ಈ ಚೊಚ್ಚಲ ಕಾರ್ಯಕ್ರಮ ಆಯೋಜಿಸಿದೆ. ಎರಡನೇ ನೆರವಿನ ಹಸ್ತವಾಗಿ ಮುಂದಿನ ತಿಂಗಳು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಗೌಡರಿಗೆ ನೀಡಲು ಮುಂದಾಗಿದೆ ಎಂದು ಸೇವಾವಾಹಿನಿ ತಿಳಿಸಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top