ರೈಎಸ್ಟೇಟ್ ಟ್ರಸ್ಟ್ ವತಿಯಿಂದ ಉದ್ಯೋಗ ಮೇಳ

ಪುತ್ತೂರು; ಯುವಜನತೆಯ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಭದ್ರತೆ ಅವರಿಗೆ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ ಯುವ ಸಮುದಾಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಅಭಿವೃದ್ಧಿಯ ದೃಷ್ಟಿಯಿಂದ ವರ್ಷಗಳಲ್ಲಿ ಯುವಕರಿಗೆ ಕೆಲಸದ ಭದ್ರತೆ ದೊರಕಿಸಿಕೊಡಬೇಕು ಎನ್ನುವುದು ನನ್ನ ಗುರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಶಾಸಕರ ಕಚೇರಿಯಲ್ಲಿ ಶನಿವಾರ ರೈ ಎಸ್ಟೇಟ್ ಟ್ರಸ್ಟ್ ವತಿಯಿಂದ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಸ್ಟರ್ ಫ್ಲಾನರಿಯ ನಿರ್ದೇಶಕ ಆಕಾಶ್ ಎಚ್.ಕೆ, ದರ್ಬೆ ಪಶುಪತಿ ಎಲೆಕ್ಟ್ರಿಕಲ್ಸ್ ಮಾಲಕ ಪಶುಪತಿ ಶರ್ಮ ಮತ್ತಿತರರು ಉದ್ಯೋಗಾಂಕ್ಷಿಗಳಿಗೆ ಮಾಹಿತಿ ನೀಡಿದರು. ಕಾವು ಹೇಮನಾಥ ಶೆಟ್ಟಿ, ಭೂನ್ಯಾಯ ಮಂಡಳಿ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ ಮತ್ತು ನಿರಂಜನ್ ರೈ ಮಟಂತಬೆಟ್ಟು, ಮುರಳೀಧರ್ ರೈ ಮಟಂತಬೆಟ್ಟು, ಅನಿತಾ ಹೇಮನಾಥ ಶೆಟ್ಟಿ, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪುತ್ತೂರು ಪುಡಾ ಸದಸ್ಯ ನಿಹಾಲ್ ರೈ, ಹರಿಪ್ರಸಾದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿದರು.







































 
 

ಉದ್ಯೋಗಮೇಳದಲ್ಲಿ ಒಟ್ಟು424 ಮಂದಿ ಉದ್ಯೋಗಾಂಕ್ಷಿಗಳು ನೋಂದಾವಣೆ ಮಾಡಿಕೊಂಡಿದ್ದರು. ನೇರ ಸಂದರ್ಶನಕ್ಕೆ 168 ಮಂದಿ ಹಾಜರಾಗಿದ್ದರು. ವಿವಿಧ ಸಂಸ್ಥೆಗಳಿಗೆ ನೇರ ಸಂದರ್ಶನದಲ್ಲಿ 186 ಮಂದಿ ಆಯ್ಕೆಯಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top