ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಡಿ.28 ಹಾಗೂ 29 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷರುಗಳಾಗಿ ಡಾ। ಸುರೇಶ್ ಪುತ್ತೂರಾಯ, ಚಂದಪ್ಪ ಮೂಲ್ಯ, ಶಶಾಂಕ್ ಕೋಟೇಚಾ, ಗೋಪಾಲಕೃಷ್ಣ ಭಟ್, ಬೂಡಿಯಾರ್ ರಾಧಾಕೃಷ್ಣ ರೈ ಅವರುಗಳು ಆಯ್ಕೆಯಾದರು.
ಅಧ್ಯಕ್ಷರಾಗಿ ಶಿವಪ್ರಸಾದ್ ಇಜ್ಜಾವು, ಕಾರ್ಯಧ್ಯಕ್ಷರಾಗಿ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ, ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ಮರುವಾಳ, ಸಂತೋಷ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಉದಯ ಕುಮಾರ್ ರೈ ಅವರುಗಳನ್ನು ಆಯ್ಕೆ ಮಾಡಲಾಯಿತು
ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜು ಶೆಟ್ಟಿ, ಕಾರ್ಯದರ್ಶಿಗಳಾಗಿ ಗಣೇಶ್ಚಂದ್ರ ಭಟ್ ಮಕರಂದ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸಂಚಾಲಕರುಗಳಾಗಿ ಪ್ರಸನ್ನ ಕುಮಾರ್ ಮಾರ್ತ, ಅನಿಲ್ ತೆಂಕಿಲ ಆಯ್ಕೆಯಾದರು
ಆಹಾರ ಸಮಿತಿ ಸಂಚಾಲಕರಾಗಿ ರಾಜೇಶ್ ಅನಂತಾಡಿ, ಅಲಂಕಾರ ಸಮಿತಿ ಸಂಚಾಲಕರಾಗಿ ಗಿರೀಶ್ ಕೂಡುರಸ್ತೆ, ಆಮಂತ್ರಣ ಸಮಿತಿ ಸಂಚಾಲಕರಾಗಿ ಉಮೇಶ್ ಎಸ್.ಕೆ. , ಆರ್ಥಿಕ ಸಮಿತಿ ಸಂಚಾಲಕರಾಗಿ ಭೀಮಯ್ಯ ಭಟ್, ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಕೃಷ್ಣ ಪ್ರಸಾದ್ ಶೆಟ್ಟಿ, ಮಹಿಳಾ ಸಮಿತಿ ಸಂಚಾಲಕರಾಗಿ ರಜತಾ ಭಟ್, ಪ್ರಚಾರ ಮತ್ತು ಮಾಧ್ಯಮ ಸಂಚಾಲಕರಾಗಿ ನವೀನ್ ಪಂಜಳ, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಸುಜಿತ್ ಕಜೆ ಬೆಟ್ಟಂಪಾಡಿ, ವೈದಿಕ ಸಮಿತಿ ಸಂಚಾಲಕರಾಗಿ ಪ್ರದೀಪ್ ಶಾಂತಿಗೋಡು ಆಯ್ಕೆಯಾದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಶ್ರೀನಿವಾಸ ಕಲ್ಯಾಣೋತ್ಸ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಕಾರ್ಯಕ್ರಮದ ರೂಪುರೇಷಗಳನ್ನು ವಿವರಿಸಿದರು. ಪ್ರಸನ್ನ ಕುಮಾರ್ ಮಾರ್ತ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅನಾವರಣಗೊಳಿಸಿದರು. ಅನಿಲ್ ತೆಂಕಿಲ ಸ್ವಾಗತಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ನೂತನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ವಂದಿಸಿದರು.