ಮುಸ್ಲಿಂ ಖದರಸ್ಥಾನಗಳಿಗೆ ಸಾವಿರಾರು ಎಕರೆ ಸರಕಾರಿ ಜಮೀನು ಮಂಜೂರಾತಿಗೆ ಕ್ರಮ

ದೇವಾಲಯಗಳು ದಶಕಗಳಿಂದ ಅರ್ಜಿ ಸಲ್ಲಿಸಿದರೂ ಸಿಗದ ಭೂಮಿ

ಬೆಂಗಳೂರು : ರೈತರ, ಮಠ ಮಂದಿರಗಳ ಜಮೀನನನ್ನು ವಕ್ಫ್‌ ಮಂಡಳಿ ಕಬಳಿಸಿದ ಬೆನ್ನಿಗೆ ಈಗ ಮುಸ್ಲಿಮರ ಖಬರಸ್ಥಾನಗಳಿಗೆ ಸರಕಾರ ಸಾವಿರಾರು ಎಕರೆ ಜಮೀನು ಮಾಡಲು ಮುಂದಾಗಿರುವ ವಿಷಯ ಬಯಲಾಗಿದ್ದು, ಕಾಂಗ್ರೆಸ್‌ ಸರಕಾರ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ರಾಜ್ಯದ 328 ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 2750 ಎಕರೆ ಭೂಮಿ ಮಂಜುರಾತಿ ನೀಡಲು ತಯಾರಿ ನಡೆಸಿದ್ದು, ಸರ್ಕಾರಿ ಭೂಮಿಯನ್ನು ಖಬರಸ್ತಾನವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.
ಬೆಂಗಳೂರು, ರಾಯಚೂರು, ಕಲಬುರಗಿ, ಹಾಸನ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ವಕ್ಫ್ ಅಧೀನದ ಮಸೀದಿ, ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ತಾನಗಳಿಗೆ ಜಮೀನು ನೀಡಲಾಗುತ್ತಿದೆ.
ಈ ಬಗ್ಗೆ ಈ ಹಿಂದೆಯೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. ಕಳೆದ ಏಪ್ರಿಲ್ 16ರಂದು ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ , ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಗೆ ಸೂಚನೆ ನೀಡಿದ್ದರು.

ರಾಜ್ಯಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯು ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರವನ್ನು 328 ಖಬರಸ್ಥಾನಗಳಿಗೆ ಕಂದಾಯ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡಾ.ಶಾಲಿನಿ ರಜನೀಶ್ ಸೂಚನೆ ನೀಡಿದ್ದರು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದರು.































 
 

ದೇವಾಲಯಗಳಿಗೆ ಇಲ್ಲ

ಇನ್ನೊಂದೆಡೆ ರಾಜ್ಯದ 34,223 ಸಿ ಗ್ರೇಡ್ ದೇವಾಲಯಗಳ ಸುತ್ತಲಿನ ಬಹುತೇಕ ಜಾಗ ಸರ್ಕಾರಿ ಭೂಮಿ. ಈ ಭೂಮಿಗೆ ದೇವಾಲಯದ ಹೆಸರಿನಲ್ಲಿ ಮಂಜೂರಾತಿ ನೀಡುವಂತೆ 2013ರಿಂದ ಧಾರ್ವಿುಕ ಪರಿಷತ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದೆ. ರಾಜ್ಯದ 5,730 ಪುರಾತನ ಧಾರ್ವಿುಕ ದೇವಾಲಯಕ್ಕೆ ಪಹಣಿ ಇಲ್ಲ. ಇವು ಇನ್ನೂ ಕಂದಾಯ ಇಲಾಖೆಯ ಭೂಮಿಯಲ್ಲೇ ಇವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top