ವಕ್ಫ್‌ ವಿರುದ್ಧ ಬಿಜೆಪಿ ಒಂದು ತಿಂಗಳು ಅಭಿಯಾನ

ಸಂತ್ರಸ್ತರ ನೆರವಿಗೆ ವಾಟ್ಸಪ್‌ ಸಹಾಯವಾಣಿ, ವಾರ್‌ ರೂಂ ಸ್ಥಾಪನೆ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ನೋಟಿಸ್​ ನೀಡಿರುವ ವಿಚಾರವಾಗಿ ನವೆಂಬರ್​​ 25ರಿಂದ ಡಿಸೆಂಬರ್​ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ವಕ್ಫ್‌ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪನೆ ಮಾಡುತ್ತಿದ್ದೇವೆ. ವಕ್ಫ್​​ನಿಂದ ಸಮಸ್ಯೆಗೆ ಸಿಲುಕಿದವರು 9035675734 ವಾಟ್ಸಪ್ ನಂಬರಿಗೆ ದೂರು ನೀಡಬಹುದು. ನಮ್ಮ ಯಾವುದೇ ನಾಯಕರನ್ನೂ ಭೇಟಿ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ. ನವೆಂಬರ್ 25ರಿಂದ ಶಾಸಕ ಬಸನಗೌಟ ಪಾಟೀಲ್​ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಹಲವರ ನೇತೃತ್ವದಲ್ಲಿ ಜಾಥಾ ಪ್ರಾರಂಭವಾಗಲಿದೆ.

ಮೂರು ಬೇಡಿಕೆಗಳೊಂದಿಗೆ ಅಭಿಯಾನ ನಡೆಯಲಿದೆ. 1954ರಿಂದ ರಚನೆಯಾಗಿರುವ ವಕ್ಪ್ ಸಂಬಂಧಿತ ಗೆಜೆಟ್‌ಗಳನ್ನು ರದ್ದು ಮಾಡಬೇಕು. ರೈತರು, ದೇವಸ್ಥಾನ ಸೇರಿದಂತೆ ವಕ್ಫ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರುವ ಜಾಗಗಳನ್ನು ಶಾಶ್ವತವಾಗಿ ಬಿಟ್ಟು ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.































 
 

ವಕ್ಫ್​​ ನ್ಯಾಯಾಧಿಕರಣ ರದ್ದಾಗಬೇಕು. 6.70 ಲಕ್ಷ ಎಕರೆ ಆಸ್ತಿ ಸ್ವಾಧೀನಕ್ಕೆ ವಕ್ಫ್​​ ಯತ್ನಿಸುತ್ತಿದೆ. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಅಭಿಯಾನ ಮಾಡಿ ಜೆಪಿಸಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ಎಷ್ಟೋ ಮಾಹಿತಿಗಳು ಇನ್ನೂ ಕೇಂದ್ರ ಸರ್ಕಾರ, ಜೆಪಿಸಿಗೆ ಸಿಕ್ಕಿಲ್ಲ. ಜಮೀರ್ ಅಹ್ಮದ್ ಧಮ್ಕಿ ಹಾಕಿದ್ದಕ್ಕೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಮುಸ್ಲಿಂ ರೈತರು ಕೂಡ ನಮ್ಮ ಅಭಿಯಾನದ ಪರವಾಗಿಯೇ ಇದ್ದಾರೆ. ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿದ್ದರೂ ಸಮರ್ಥನೆ ಮಾಡಿಕೊಳ್ಳಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೆ ವಕ್ಫ್ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ. ನೇರವಾಗಿ ಕೇಂದ್ರ ಸಚಿವರು ಹೋರಾಟಕ್ಕೆ ಬಂದಿದ್ದರು. ಕೇಂದ್ರ ಸರ್ಕಾರ ಬೆಂಬಲಕ್ಕೆ ಇದೆ. ಕೇಂದ್ರ ಬಿಜೆಪಿ ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದೆ. ರಾಜ್ಯ ಬಿಜೆಪಿ ಅದರ ಒಂದು ಭಾಗ ಎಂದು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top