2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಇರುವ ಸರ್ಕಾರಿ ರಜೆಯನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.
ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26/01/2025), ಯುಗಾದಿ ಹಬ್ಬ (30/03/2025), ಮೂಹರಂ ಕಡೆ ದಿನ (06/07/2025) ಮತ್ತು ಮಹಾಲಯ ಅಮವಾಸ್ಯೆ (21/09/2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿ (08/11/2025) ನಮೂದಿಸಿರುವುದಿಲ್ಲ.
ರಜೆ ದಿನಗಳನ್ನು ಸಾರ್ವತ್ರಿಕ ರಜಾ ದಿನಗಳು, ಪರಿಮಿತ ರಜಾ ದಿನಗಳು ಎಂದು ಎರಡು ಪಟ್ಟಿಯನ್ನು ಮಾಡಲಾಗಿದೆ. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ. ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು

  • 14.01.2025 – ಮಂಗಳವಾರ ಮಕರ ಸಂಕ್ರಾಂತಿ
  • 26.02.2025 – ಬುಧವಾರ ಮಹಾಶಿವರಾತ್ರಿ
  • 31.03.2025 – ಸೋಮವಾರ ಖುತುಬ್-ಎ-ರಂಜಾನ್
  • 10.04.2025 – ಗುರುವಾರ ಮಹಾವೀರ ಜಯಂತಿ
  • 14.04.2025 – ಸೋಮವಾರ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
  • 18.04.2025 – ಶುಕ್ರವಾರ ಗುಡ್‌ಫ್ರೈಡೆ
  • 30.04.2025 – ಬುಧವಾರ ಬಸವ ಜಯಂತಿ, ಅಕ್ಷಯ ತೃತೀಯ
  • 1.05.2025 – ಗುರುವಾರ ಕಾರ್ಮಿಕ ದಿನಾಚರಣೆ
  • 7.06.2025 – ಶನಿವಾರ ಬಕ್ರೀದ್
  • 15.08.2025 – ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
  • 27.08.2025 – ಬುಧವಾರ ವರಸಿದ್ಧಿ ವಿನಾಯಕ ವ್ರತ
  • 5.09.2025 – ಶುಕ್ರವಾರ ಈದ್ ಮಿಲಾದ್
  • 1.10.2025 – ಬುಧವಾರ ಮಹಾನವಮಿ, ಆಯುಧಪೂಜೆ, ವಿಜಯದಶಮಿ
  • 2.10.2025 – ಗುರುವಾರ ಗಾಂಧಿ ಜಯಂತಿ
  • 7.10.2025 – ಮಂಗಳವಾರ ವಾಲ್ಮೀಕಿ ಜಯಂತಿ
  • 20.10.2025 – ಸೋಮವಾರ ನರಕ ಚತುದರ್ಶಿ
  • 22.10.2025 – ಬುಧವಾರ ಬಲಿಪಾಡ್ಯಮಿ, ದೀಪಾವಳಿ
  • 01.11.2025 – ಶನಿವಾರ ಕನ್ನಡ ರಾಜೋತ್ಸವ
  • 25.12.2025 – ಗುರುವಾರ ಕ್ರಿಸ್‌ಮಸ್
  • ಶ್ರೀ ರಾಮನವಮಿ (06.04.2025) ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ (07.09.2025) ಭಾನುವಾರದಂದು ಹಾಗೂ ಋಗ್ ಉಪಾಕರ್ಮ ಮತ್ತು ಯಜುರ್ ಉಪಾಕರ್ಮ (09.08.2025) ಎರಡನೇ ಶನಿವಾರದಂದು ಬರುವುದರಿಂದ ಇವುಗಳನ್ನು ಪರಿಮಿತ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.
  • ಸೌರಮಾನ ಯುಗಾದಿ (14.04.2025) ಸೋಮವಾರ, ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಹಾಗೂ ತಿರುಓಣಂ (05.09.2025) ಶುಕ್ರವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ಪರಿಮಿತ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top