ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಧನಸಹಾಯ ಹಸ್ತಾಂತರ

ಬಂಟ್ವಾಳ: ತಾಲೂಕಿನ ವಿಟ್ಲ ಮೂಡ್ನೂರು ಗ್ರಾಮದ ಮರುವಾಳ ಮೇದಪ್ಪ ರವರ 2 ವರ್ಷದ ಮಗಳಾದ ತ್ರಿಷಾ ಅನಾರೋಗ್ಯದಿಂದ ಚಿಕಿತ್ಸೆ ಫಲಾಕಾರಿಯಾಗದೆ ನಿಧನ ಹೊಂದಿದ್ದು ಅವರ ಕುಟುಂಬಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಧನಸಹಾಯ ನೀಡಲಾಯಿತು.

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆಗೆ 4-5 ಲಕ್ಷ ಹಣವನ್ನು ಖರ್ಚು ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಮಹೇಂದ್ರ ವರ್ಮಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಮನೀಶ್ ಕುಲಾಲ್, ಪ್ರಜ್ವಲ್ ಘಾಟೆ, ಹರೀಶ್ ಪೂಜಾರಿ ಮರುವಾಳ, ಬಬಿತ ಉಮೇಶ್, ಜೀವನ್ ಉಪಸ್ಥಿತರಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top