ಚಿಲ್ಲರೆ ವಿಚಾರದಲ್ಲಿ ಸರಕಾರಿ ಬಸ್ ನಿರ್ವಾಹಕನ ಕೆನ್ನೆಗೆ ಬಾರಿಸಿದ ಪ್ರಯಾಣಿಕ | ಪೊಲೀಸರ ಅತಿಥಿಯಾದ ಪ್ರಯಾಣಿಕ

ವಿಟ್ಲ: ಚಿಲ್ಲರೆ ಹಣದ ವಿಚಾರದಲ್ಲಿ ಸರ್ಕಾರಿ ಬಸ್ ನಿರ್ವಾಹಕನಿಗೆ ಪ್ರಯಾಣಿಕನೋರ್ವ ಕಪಾಳಮೋಕ್ಷ ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ.

ಪುತ್ತೂರು-ವಿಟ್ಲ-ಕುಳಾಲು ಸಂಚರಿಸುವ ಸರ್ಕಾರಿ ಬಸ್ ಗುರುವಾರ ಬೆಳಗ್ಗೆ ಎಂದಿನಂತೆ ಪುತ್ತೂರಿನಿಂದ ಬಂದು ಕೊಳ್ನಾಡು ಗ್ರಾಮದ ಕುಳಾಲು ತಲುಪಿ ಮತ್ತೆ ಪುತ್ತೂರಿನತ್ತ ಹೊರಟಿತ್ತು. ಈ ಸಂದರ್ಭದಲ್ಲಿ ‌ ಬಸ್ಸಿನಲ್ಲಿದ್ದ ಪ್ರಯಾಣಿಕನೊಬ್ಬ ಚಿಲ್ಲರೆ ಹಣದ ವಿಚಾರದಲ್ಲಿ ನಿರ್ವಾಹಕನ ಜೊತೆ ಜಗಳ ತೆಗೆದು, ನಿರ್ವಾಹಕನ ಕೆನ್ನೆಗೆ ಹೊಡೆದಿದ್ದಾನೆ.

ಹಲ್ಲೆಯಿಂದಾಗಿ ನಿರ್ವಾಹಕನ ಕಿವಿಯಲ್ಲಿ ರಕ್ತ ಸೋರಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ವಿಟ್ಲ ಠಾಣೆಯ ಮುಂಭಾಗ ನಿಲ್ಲಿಸಿ ಆರೋಪಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಆರೋಪಿ ಯಾರೆಂದು ತಿಳಿದು ಬಂದಿಲ್ಲ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top