ಪುತ್ತೂರು: ನ.13 ರಂದು ತುಳಸಿ ಪೂಜೆಯ ದಿನ ರಾಜ್ಯಾದ್ಯಂತ ಮನೆ_ಮನೆಗಳಲ್ಲಿ ತಾಯಂದಿರು ಏಕಕಾಲದಲ್ಲಿ ಮನೆಯವರೊಂದಿಗೆ ಸಾಯಂಕಾಲ ತುಳಸಿ ಗೆ ಹೂವಿಟ್ಟುಆರತಿ ಎತ್ತುವ ಮೂಲಕ ಸರಳವಾಗಿ ತುಳಸಿ ಪೂಜೆ ಮಾಡುವ ಸಂಕಲ್ಪದೊಂದಿಗೆ ಪುತ್ತೂರು ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಭಾನುವಾರ ಪ್ರಾರ್ಥಿಸಲಾಯಿತು.
ಪುತ್ತೂರು ಮಹಾಲಿಂಗೇಶ್ವರ ದೇವಳದ ನಿಕಟಪೂರ್ವ ಅಧ್ಯಕ್ಷ, ದೇವಾಲಯಗಳ ಸಂವರ್ಧನಾ ಸಮಿತಿಯ ವಿಭಾಗ ಪ್ರಮುಖ ಕೇಶವ ಪ್ರಸಾದ್ ಮುಳಿಯ, ಪ್ರಾಂತ ಸಹ ಸೇವಾ ಪ್ರಮುಖ ನ. ಸೀತಾರಾಮ್ ಸುಳ್ಯ,, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯ, ದೇವಾಲಯಗಳ ಸಂವರ್ಧನಾ ಸಮಿತಿಯ ವಿಭಾಗ ಸಂಯೋಜಕ ಪ್ರಸನ್ನ ದರ್ಭೆ, ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ, ದೇವಾಲಯಗಳ ಸಂವರ್ಧನಾ ಸಮಿತಿಯ ಸದಸ್ಯ ಯದುಶ್ರೀ ಆನೆಗುಂಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಶವ ಪ್ರಸಾದ್ ಮುಳಿಯ, ನಮ್ಮ ಮನೆ ಮನೆ ಗಳಲ್ಲಿ ನಮ್ಮ ಸಂಸ್ಕೃತಿಯ ಆಚರಣೆಗಳು ಮಾಯವಾಗುತ್ತಾ, ಪಾಶ್ಚಾತ್ಯ ಸಂಸ್ಕೃತಿಗಳ ಕಡೆ ಮುಖ ಮಾಡುವ ಈ ಸಂದರ್ಭಗಳಲ್ಲಿ ನಮ್ಮ ಮನೆಯ ಮಕ್ಕಳಲ್ಲಿ ಅರಿವು ಮೂಡಿಸಲು ನಮ್ಮ ಧರ್ಮ ನಮ್ಮರಕ್ಷಣೆಯ ಅಡಿಯಲ್ಲಿ
ಕಳೆದ ವರ್ಷ ಕಡಬ ತಾಲೂಕಿನ ಕೊಯಿಲ ಗ್ರಾಮದ ಮನೆ ಮನೆಗಳಲ್ಲಿ ಮಕ್ಕಳಿಂದ ಶಾರದ ಪೂಜೆ ಹಾಗು ಮಾತೆಯರಿಂದ ತುಳಸಿ ಪೂಜೆ ಶ್ರೀ ಸದಾಶಿವ ದೇವಸ್ಥಾನದ ವತಿಯಿಂದ ತಿಳಿಸಲಾಗಿದ್ದು,ಅತ್ಯಂತ ಯಶಸ್ವಿಯಾಗಿ ನಡೆದಿತ್ತು.. ಹಾಗೆಯೇ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮನೆ ಮನೆಯಲ್ಲಿ ಮಾತೆಯರಿಂದ ತುಳಸಿ ಪೂಜೆ ಜರಗಲಿ ಅನ್ನುವ ಅಪೇಕ್ಷೆ ನಮ್ಮದು ಎಂದರು.