ಪುತ್ತೂರು: ಕೃಷ್ಣಪ್ರಸಾದ್ ಕೆ.ಎಸ್ ಅವರ ಮಾಲಕತ್ವದ ‘ಶ್ರೀ ಲಕ್ಸ್ಮಿ’ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ಕುಂಬ್ರದ ಅಮೋಘ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಶ್ರೀರಾಮ ಮುಗ್ರೋಡಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿರು. ಕರೋಪಾಡಿ ಚೋರ್ಲವಾಣಿಯರ ತರವಾಡು ಸಂಚಾಲಕ ರಾಮಕೃಷ್ಣ ಮಾಂಬಾಡಿ ಯಂತ್ರದ ಚಾಲನೆ ಗೈದರು.
ಈ ಸಂದರ್ಭದಲ್ಲಿ ಕುಂಬ್ರ ಚಂದನ್ ಕಾಂಪ್ಲೆಕ್ಸ್ ಮಾಲಕ ರಾಮ್ ಮೋಹನ್, ಹಿರಿಯ ಧಾರ್ಮಿಕ ಮುಖಂಡ ಅರುಣಕುಮಾರ್ ಪುತ್ತಿಲ, ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಮುಂತಾದ ಗಣ್ಯರು ಭಾಗವಹಿಸಿ ಶುಭಹಾರೈಸಿದರು.
ಸಂಸ್ಥೆಯಲ್ಲಿ ಎಲ್ಲಾ ತರಹದ ಮೆಣಸು ಮತ್ತು ಧಾನ್ಯ ಗಳನ್ನು ಹುಡಿ ಮಾಡಿ ಕೊಡಲಾಗುವುದು. ಕೃಷಿಕರಿಂದಲೇ ಖರೀದಿಸಿದ ತೆಂಗಿನ ಕಾಯಿಗಳಿಂದ ಸ್ವತಃ ತಯಾರಿಸಿದ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ನೀಡಲಾಗುವುದು ಎಂದು ಮಾಲಕ ಕೃಷ್ಣಪ್ರಸಾದ್ ಕೆ.ಎಸ್ ಈ ಸಂದರ್ಭದಲ್ಲಿ ತಿಳಿಸಿ ಗ್ರಾಹಕರ ಸಹಕಾರ ಕೋರಿದರು.