ನ 10:ಕಾವು ವಿಶ್ವ ಹಿಂದೂ ಪರಿಷತ್ ಬಜರಂಗದಳ  ಗೋಪೂಜಾ ಸಮಿತಿಯಿಂದ ಸಾಮೂಹಿಕ ಗೋಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ

ಕಾವು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 13 ನೇ ವರ್ಷದ ಸಾಮೂಹಿಕ ಗೋಪೂಜೆ, ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನ 10 ರಂದು ನಡೆಯಲಿದೆ.

ಸಾಮೂಹಿಕ ಗೋಪೂಜೆ

ಸಂಜೆ ಗಂಟೆ 6.30 ಕ್ಕೆ ವೇದಮೂರ್ತಿ ಶ್ರೀ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಲಿದೆ.































 
 

ಧಾರ್ಮಿಕ ಸಭಾ ಕಾರ್ಯಕ್ರಮ

ಸಂಜೆ  ಗಂಟೆ 7 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷಯನ್ನು ಗೋಪೂಜಾ ಸಮಿತಿ ಕಾವು ಇದರ ಅಧ್ಯಕ್ಷರಾದ ನಹುಷ ಭಟ್ ವಹಿಸಲಿದ್ದು, ಧಾರ್ಮಿಕ ಉಪನ್ಯಾಸವನ್ನು ವಿಶ್ವ ಹಿಂದೂ ಪರಿಷತ್  ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ನಗರ ಪ್ರಖಂಡದ ಅಧ್ಯಕ್ಷರಾದ ದಾಮೋದರ ಪಾಟಾಳಿ ,ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ವಿಶ್ವ ಹಿಂದೂ ಪರಿಷತ್ ಕಾವು ಘಟಕದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಭಾಗವಹಿಸಲಿದ್ದಾರೆ.

ಭಜನಾ ಕಾರ್ಯಕ್ರಮ

ಸಂಜೆ ಗಂಟೆ 4.30 ಕ್ಕೆ ದುರ್ಗಾವಾಹಿನಿ ಭಜನಾ ತಂಡ ಮಾಣಿಯಡ್ಕ,

ಶ್ರೀ ಪಂಚಲಿಂಗೇಶ್ವರ ಭಜನ ತಂಡ ಅಮ್ಮಿನಡ್ಕ,

ಓಂ ಶ್ರೀ ಭಜನಾ ತಂಡ ಸಸ್ಪೆಟ್ಟಿ,

ಗೆಳೆಯರ ಬಳಗ ಭಜನಾ ತಂಡ ಕಾವು ಇವರುಗಳಿಂದ  ಭಜನಾ ಸೇವೆ ನಡೆಯಲಿದೆ.

ತುಳು ಹಾಸ್ಯಮಯ ಕುಶಲ್ಡೊ0ತೆ ಅಸಲ್ ಹಾಸ್ಯ ಕಾರ್ಯಕ್ರಮ

ಕಾರ್ಯಕ್ರಮ ಬಳಿಕ ರಾತ್ರಿ ಗಂಟೆ 8.30 ರಿಂದ ಟೀಮ್ ಮಂಜುಶ್ರೀ ತಂಡದಿಂದ ಕುಶಲ್ಡೊ0ತೆ ಅಸಲ್ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗೋಪೂಜಾ ಸಮಿತಿ ಅಧ್ಯಕ್ಷರಾದ ನಹುಷ ಭಟ್, ಕಾರ್ಯದರ್ಶಿ ಶಿವಕುಮಾರ್ ಕಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top