ಸಭೆಯಲ್ಲಿ ಕಡತ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 14 ಮುಡಾ ಸೈಟ್‌ಗಳನ್ನು ಪಡೆದುಕೊಂಡ ವಿಚಾರ ಬಯಲಾದ ಬಳಿಕ ಮುಡಾದ ಕಡತಗಳು ನಾಪತ್ತೆಯಾಗಿರುವ ಆರೋಪ ಕೆಳಿಬಂದಿತ್ತು. ಈಗ ಮುಡಾ ಅಧಿಕಾರಿಗಳೇ ಕಡತಗಳು ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಮುಡಾದ 50:50 ಅನುಪಾತದ ದಾಖಲೆಗಳೇ ಮಾಯವಾಗಿರುವುದನ್ನು ಮುಡಾ ಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿರುವ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.
50:50 ಅನುಪಾತದ ‘ಆಯ್ದ ಕೆಲವು ಸೈಟ್’ಗಳ ದಾಖಲೆಗಳೇ ಮಾಯವಾಗಿವೆ. ಮುಡಾ ಪ್ರಾಧಿಕಾರದ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50:50 ಅನುಪಾತದ ಕೆಲವು ಆಯ್ದ ಸೈಟ್‌ಗಳ ಕಡತಗಳೇ ಇಲ್ಲ. ಹಿಂದಿನ ಆಯುಕ್ತರು ಅವುಗಳನ್ನು ತೆಗೆದುಕೊಂಡು ಹೋಗಿರಬೇಕು ಅಥವಾ ಸುಟ್ಟು ಹಾಕಿರಬೇಕು ಎಂದು ಪ್ರಾಧಿಕಾರದ ಜನಪ್ರತಿನಿಧಿ ಸದಸ್ಯರ ಮುಂದೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
50:50 ಅನುಪಾತದಲ್ಲಿ ನಿರ್ದಿಷ್ಟವಾಗಿ ಇಂತಿಷ್ಟೆ ಸಂಖ್ಯೆ ಸೈಟ್ ಹಂಚಿಕೆ ಆಗಿವೆ ಎಂಬ ಬಗ್ಗೆ ಪ್ರಾಧಿಕಾರದ ಬಳಿ ಮಾಹಿತಿಯೇ ಇಲ್ಲ. ಕೆಲವು ಸೈಟ್‌ಗಳ ದಾಖಲೆ ಕೇಳಿದರೆ ಅವು ಕಳೆದು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರಿಂದ 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಟೆನ್ಷನ್ ಶುರುವಾಗಿದೆ. ಮನೆ ನಿರ್ಮಿಸಲು ಅನುಮತಿ ಸಿಗುವುದಿಲ್ಲ. ಮನೆ ಕಟ್ಟಲು ಆರಂಭ ಮಾಡಿದವರಿಗೂ ಅರ್ಧಕ್ಕೆ ನಿಲ್ಲಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ.