ಇಸ್ಲಾಮಾಬಾದ್: ಪಾಕಿಸ್ಥಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ಎರಡು ಪ್ರಬಲ ಬಾಂಬ್‌ಗಳು ಸ್ಫೋಟಿಸಿ ಹಲಸು ಮಂದಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ. ಸಾವುನೋವಿನ ನಿಖರ ಅಂಕಿಆಂಶ ಇನ್ನೂ ಬಹಿರಂಗಗೊಂಡಿಲ್ಲ.
ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಬಳಿ ಎರಡು ಬಾಂಬ್ ಸ್ಫೋಟಗೊಂಡಿವೆ. ಪೇಶಾವರಕ್ಕೆ ಹೋಗುವ ಎಕ್ಸ್‌ಪ್ರೆಸ್ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು. ಇದರಿಂದಾಗಿ ನಿಲ್ದಾಣ ಭಾರಿ ಜನಸಂದಣಿಯಿತ್ತು. ಈ ವೇಳೆ ಸ್ಫೋಟ ಸಂಭವಿಸಿದ್ದು, ಒಂದರ ಹಿಂದೆ ಒಂದರಂತೆ ಒಟ್ಟು ಎರಡು ಬಾಂಬ್ ಸ್ಫೋಟಗೊಂಡಿವೆ. ಮೊದಲ ಬಾಂಬ್ ಸ್ಫೋಟಗೊಂಡಾಗ 4 ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ 26 ಜನರು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ. ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.