ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್ ಬಂಗಲೆಯಲ್ಲಿದ್ದ ಸೌಲಭ್ಯಗಳಿವು
ಹೊಸದಿಲ್ಲಿ : 50 ಎಸಿಗಳು, 75 ಬೋಸ್ ಸೀಲಿಂಗ್ ಸ್ಪೀಕರ್‌ಗಳು, ಜಾಕುಝಿ, ಮಸಾಜ್ ಕೇಂದ್ರ, ಟಚ್‌ಸ್ಕ್ರೀನ್ ಅಳವಡಿಸಿದ 73 ಲೀಟರ್ ಸ್ಟೀಮ್ ಓವನ್…ಇದು ದಿಲ್ಲಿಯ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಗಲೆಯಲ್ಲಿದ್ದ ಐಷರಾಮಿ ಸೌಲಭ್ಯಗಳು!
ಮದ್ಯ ಹಗರಣದಲ್ಲಿ ಸಿಕ್ಕಿಬಿದ್ದು ಜೈಲುಪಾಲಾದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಅರವಿಂದ ಕೇಂಜ್ರಿವಾಲ್ ರಾಜೀನಾಮೆ ನೀಡಿದ್ದಾರೆ. ಬಳಿಕ ಅವರು ವಾಸವಾಗಿದ್ದ ದಿಲ್ಲಿಯ ಸಿವಿಲ್ ಲೈನ್ಸ್‌ನ 6 ಫ್ಲ್ಯಾಗ್‌ಸ್ಟಾಫ್ ರಸ್ತೆಯಲ್ಲಿರುವ ಸರಕಾರಿ ಬಂಗಲೆಯಲ್ಲಿದ್ದ ಸೊತ್ತುಗಳ ಪಟ್ಟಿಯನ್ನು ಲೋಕೋಪಯೋಗಿ ಇಲಾಖೆ ತಯಾರಿಸಿದೆ. ಈ ಪಟ್ಟಿ ಮತ್ತು ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಇದು ದಿಲ್ಲಿಯ ಜನಸಾಮಾನ್ಯರ ಸರಳ ಮುಖ್ಯಮಂತ್ರಿಯ ಐಷರಾಮಿ ಬದುಕಿನ ಒಂದು ನೋಟ ಎಂದು ಲೇವಡಿ ಮಾಡಿದ್ದಾರೆ.
ಕಳೆದ ತಿಂಗಳು ಕೇಂಜ್ರಿವಾಲ್ ಈ ಬಂಗಲೆಯನ್ನು ಖಾಲಿ ಮಾಡಿದ್ದು, ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ನಿಯಮ ಪ್ರಕಾರ ಬಂಗಲೆಯಲ್ಲಿದ್ದ ಸೊತ್ತುಗಳ ಪಟ್ಟಿ ತಯಾರಿಸಿದೆ. ಕೇಜ್ರಿವಾಲ್ ಮುಖ್ಯಮಂತ್ರಿಯಾದಾಗ ಈ ಬಂಗಲೆಯ ನವೀಕರಣಕ್ಕೆ 45 ಕೋಟಿ ರೂಪಾಯಿ ವ್ಯಯಿಸಿದ್ದರು. ಸಾದಾ ಪ್ಯಾಂಟ್-ಶರ್ಟ್ ಮತ್ತು ಚಪ್ಪಲಿ ಧರಿಸಿ ಓಡಾಡುತ್ತಾ ತಾನೊಬ್ಬ ಸರಳ ನಾಯಕ ಎಂದು ಫೋಸ್ ಕೊಡುತ್ತಿದ್ದ ಕೇಜ್ರಿವಾಲ್ ಬದುಕಿನ ಶೈಲಿ ಮಾತ್ರ ಯಾವ ರಾಜ ಮಹಾರಾಜರಿಗೂ ಕಡಿಮೆಯಿಲ್ಲದಂತೆ ಇತ್ತು ಎನ್ನುವುದು ಅವರ ಬಂಗಲೆಯಲ್ಲಿದ್ದ ಸೌಲಭ್ಯಗಳು ಬಹಿರಂಗಪಡಿಸಿವೆ.
ಬೋಸ್ ಕಂಪನಿಯ ದುಬಾರಿ ಸೀಲಿಂಗ್ ಸ್ಪೀಕರ್‌ಗಳನ್ನು ಜಿಮ್, ಕಿಚನ್, ಬಾತ್‌ರೂಮ್ ಮತ್ತು ಶೌಚಾಲಯದ ಒಳಗೂ ಅಳವಡಿಸಲಾಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಂದಿರುವ 934 ಲೀಟರ್ ಸಾಮರ್ಥ್ಯದ ಬೃಹತ್ ವಿದೇಶಿ ಫ್ರಿಜ್, 50 ಎಸಿಗಳು, 250 ಟನ್ ಸಾಮರ್ಥ್ಯದ ಏರ್ ಕಂಡೀಶನಿಂಗ್ ಪ್ಲಾಂಟ್, 29 ಲ.ರೂ. ಬೆಲೆಬಾಳುವ ಟಿವಿ ಕೇಂಜ್ರಿವಾಲ್ ಬಂಗಲೆಯೊಳಗಿದ್ದ ಅತ್ಯಾಧುನಿಕ ಸೌಲಭ್ಯಗಳು. ಬಂಗಲೆಯಲ್ಲಿರುವ ಟಾಯ್ಲೆಟ್ ಕಮೋಡ್‌ಗಳ ಮೌಲ್ಯವೇ 12 ಕೋ. ರೂ. ಆಗುತ್ತದೆ ಎಂದು ಮೌಲ್ಯಮಾಪನದಲ್ಲಿ ತಿಳಿದುಬಂದಿದೆ.
55-77 ಇಂಚಿನ ಟಿವಿಗಳನ್ನು ಹಲವು ಕೊಠಡಿಗಳಲ್ಲಿ ಅಳವಡಿಸಲಾಗಿತ್ತು. ಜಾಕುಝಿ, ಮಸಾಜ್ ಕೇಂದ್ರ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳು 21 ಸಾವಿರ ಚದರ ಅಡಿಯ ಬಂಗಲೆಯಲ್ಲಿದ್ದವು.