ಪುತ್ತೂರು: ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ಟ್ರಸ್ಟ್ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಬಲ್ನಾಡು ಗ್ರಾಮದ ಮೂವರು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುತ್ತಪ್ಪ ಗೌಡ – ದಮಯಂತಿ (ಕಾಂತಿಲ ಮನೆ.ಬಲ್ನಾಡು), ಬಾಬು ಗೌಡ – ಚಂದ್ರಾವತಿ (ಬ್ರಹ್ಮರಕೋಡಿ,ಬಲ್ನಾಡು) ಹಾಗೂ ಸೇಸಪ್ಪ ಗೌಡ – ಯಮುನಾ
(ಮುದಲಾಜಿ ಮನೆ, ಬಲ್ನಾಡು ಕಾಂತಿಲ ಮಾಧವ ಗೌಡರ ಮನೆ ಬಲ್ನಾಡು) ಅವರನ್ನು ಸನ್ಮಾನಿಸಲಾಯಿತು.
ಬಾಲಕೃಷ್ಣ ಗೌಡ ಬಲ್ನಾಡು ಕಟ್ಟೆಮನೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮೂರು ದಂಪತಿಗಳನ್ನು ಸನ್ಮಾನಿಸಿದರು. ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಬಲ್ನಾಡು, ಬಲ್ನಾಡು ಗ್ರಾಮಸ ಸಮಿತಿ ಕಾರ್ಯದರ್ಶಿ ದಿವ್ಯಪ್ರಸಾದ್, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎ.ವಿ.ನಾರಾಯಣ, ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್, ಕಾರ್ಯದರ್ಶಿ ಹೂವಪ್ಪ ಗೌಡ, ಮೇಲ್ವಿಚಾರಕಿ ನಮಿತಾ ಗೌಡ ಪಾಲ್ಗೊಂಡಿದ್ದರು. ಕಾಂತಿಲ ಮಾಧವ ಗೌಡ ಸ್ವಾಗತಿಸಿದರು.