ಪುತ್ತೂರು: ಡಿ. 20, 21, 22, ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮ್ಮೇಳನದಲ್ಲಿ ಕನ್ನಡ ಪ್ರೇಮಿಗಳು ಭಾಗಿಯಾಗುವ ಹಿನ್ನಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥ ನ. 8 ರಂದು ಶುಕ್ರವಾರ ಪುತ್ತೂರಿಗೆ ಆಗಮಿಸಲಿದೆ.
ಮಧ್ಯಾಹ್ನ 12 ಗಂಟೆಗೆ ಕಬಕ ವೃತ್ತದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಥವನ್ನು ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಂಚರಿಸಿ ಮುಖ್ಯ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಯಿಂದ ಆಡಳಿತ ಸೌಧಕ್ಕೆ ಮಧ್ಯಾಹ್ನ ಸುಮಾರು 12:30 ಕ್ಕೆ ತಲುಪಲಿದೆ. ಬಳಿಕ ಸಹಾಯಕ ಆಯುಕ್ತರು, ತಹಸಿಲ್ದಾರ್, ತಾಲೂಕ್ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಪೊಲೀಸ್ ಇಲಾಖೆ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಸಂಸ್ಥೆಗಳು , ಲಯನ್ಸ್, ಜೆ ಸಿ ಐ,ಇನ್ನರ್ವಿಲ್, ಹಾಗೂ ಇನ್ನಿತರ ಸಂಘ ಸಂಸ್ಥೆಗಳು , ಕನ್ನಡ ಪ್ರೇಮಿಗಳು ಸೇರಿ ರಥವನ್ನು ಸ್ವಾಗತಿಸಲಿದ್ದಾರೆ.
ಸಹಾಯಕ ಆಯುಕ್ತರು ಈ ರಥಕ್ಕೆ ಚಾಲನೆಯನ್ನು ನೀಡಲಿದ್ದು, ಬಳಿಕ ಕೋರ್ಟು ರಸ್ತೆಯಾಗಿ ಎಪಿಎಂಸಿ ರಸ್ತೆ ಮೂಲಕ ಬೆಳ್ತಂಗಡಿಗೆ ಪುತ್ತೂರು ತಾಲೂಕು ಸರಹದ್ದು ತನಕ ಈ ಕನ್ನಡ ರಥವನ್ನು ಬೀಳ್ಕೊಡಲಾಗುವುದು.
ಎಲ್ಲಾ ಕನ್ನಡ ಪ್ರೇಮಿಗಳು ಪುತ್ತೂರಿನ ಎಲ್ಲ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಕನ್ನಡ ರಥವನ್ನು ಸ್ವಾಗತಿಸಲು ಭಾಗಿಯಾಗಬೇಕಾಗಿ ವಿನಂತಿ ಸಂಘಟಕರು ವಿನಂತಿಸಿದ್ದಾರೆ.