ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣದಲ್ಲಿ ಖುದ್ದು ಸರಕಾರವೇ ಮುತುವರ್ಜಿ ವಹಿಸಿ ರೈತರಿಂದ ಭೂಮಿ ಕಬಳಿಸಲು ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳ ಆಸ್ತಿಯನ್ನ ಕಬಳಿಸುವ ಕೆಲಸವನ್ನ ಸಚಿವ ಜಮೀರ್ ಅಹ್ಮದ್ ಮೂಲಕ ಲ್ಯಾಂಡ್ ಜಿಹಾದಿಗೆ ಬೆಂಬಲ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.
ಈ ಬಿಟ್ಟಿ ಭಾಗ್ಯಗಳನ್ನ ದ.ಕ -ಉಡುಪಿ ಜಿಲ್ಲೆಯವರು ತಿರಸ್ಕರಿಸಿದ್ದಾರೆ. ಆದ್ರೆ ಉಳಿದ ಜಿಲ್ಲೆಯವರು ಬಿಟ್ಟಿ ಭಾಗ್ಯಗಳಿಗೆ ಸೋತು ಕಾಂಗ್ರೆಸ್ ಗೆ ಮತ ಹಾಕಿದ ಪರಿಣಾಮ ಚಡಪಡಿಸುವ ಪರಿಸ್ಥಿತಿ ಬಂದಿದೆ. ಅಲ್ಪ ಸಂಖ್ಯಾತರ ಓಟು ಬ್ಯಾಂಕ್ ಗಾಗಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆಸುತಿದ್ದಾರೆ.
ಆರ್ ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ರೈತರ ಭೂಮಿಯಲ್ಲಿ ದಾಖಲಿಸುವುದು ಸರಿಯಲ್ಲ. ಮಠ, ಮಂದಿರಗಳ ಆಸ್ತಿಯಲ್ಲೂ ಕೂಡ ಇಂತದ್ದೇ ದಾಖಲಿಸಲಾಗಿದೆ. ಇದು ಇಡೀ ಹಿಂದೂ ಸಮಾಜದ ಮೇಲೆ ಮಾಡಿದ ಅನ್ಯಾಯ. ರೈತರ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಒಂದಿಂಚೂ ಜಾಗವನ್ನ ಕೂಡ ವಕ್ಫ್ ಗೆ ಬಿಟ್ಟು ಕೊಡುವುದಿಲ್ಲ. ಅದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.