ಕೇರಳದಲ್ಲಿ ಹಿಂದೂ ಸಮಾಜದ ಪೂಜ್ಯ ಸಂತರ ವಾಹನದ ಮೇಲೆ ದಾಳಿ : ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷದ್‌ ಖಂಡನೆ

ಪುತ್ತೂರು: ಕೇರಳದ ಬೊವಿಕಾನ ಪರಿಸರದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾಂದಗಳವರು ಸಂಚರಿಸುತ್ತಿದ್ದ ವಾಹನದ ಮೇಲೆ ನಡೆದಿರುವಂತಹ ದಾಳಿ ಇದು ಅತ್ಯಂತ ಖಂಡನೀಯವಾಗಿದ್ದು, ಇದನ್ನು ಪುತ್ತೂರು ಜಿಲ್ಲಾ ವಿಶ್ವ ಹಿಂದು ಪರಿಷದ್ ಖಂಡಿಸಿದೆ.

ಇಂದು ಸಂತರುಗಳಿಗೆ, ಹಿಂದೂ ಧರ್ಮದ ಶ್ರದ್ಧಾ ಬಿಂದುಗಳಿಗೆ ಸೂಕ್ತ ರಕ್ಷಣೆ ಇಲ್ಲದ ರೀತಿಯಲ್ಲಿ ಕೇರಳದಲ್ಲಿ ಗೂಂಡಾರಾಜ್ಯ ನಿರ್ಮಾಣವಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಿಹಿಂಪ ಹೇಳಿದೆ.

.ಶೀಘ್ರ ಕೇರಳ ಪೋಲಿಸ್ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಹಿಂದೂ ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಆಗ್ರಹಿಸುತ್ತದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top