ಈ ಸೀಸನ್‌ನಲ್ಲಿ ನಡೆಯಲಿವೆ 40 ಲಕ್ಷ ಮದುವೆಗಳು!

ಮದುವೆಯೊಂದರಿಂದಲೇ 6 ಲಕ್ಷ ಕೋಟಿ ರೂ. ವಹಿವಾಟು

ಬೆಂಗಳೂರು : ಮಳೆಗಾಲ ಮುಗಿದದ್ದೇ ತಡ ಮದುವೆ ಸೀಸನ್‌ ಶುರುವಾಗಿದೆ. ಈಗ ಮದುವೆ ಕೂಡ ಪ್ರತಿಷ್ಠೆಯ ಸಂಕೇತವಾಗಿದೆ. ಎಷ್ಟು ದುಡ್ಡು ಇದ್ದರೂ ಮದುವೆ ಖರ್ಚಿಗೆ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿಯಿದೆ. ಸಾಲಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಯಾಗುವ ಶೋಕಿ ಎಲ್ಲೆಡೆ ಕಾಣಿಸುತ್ತದೆ. ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಮದುವೆಗಳು ಈಗ ಈವೆಂಟ್‌ ಮ್ಯಾನೇಜ್‌ಮೆಂಟ್‌ ಬದಲಾಗಿವೆ. ಎಂಗೇಜ್‌ಮೆಂಟ್‌ನಿಂದ ಹಿಡಿದು ಮೊದಲ ರಾತ್ರಿಯ ತನಕದ ಮದುವೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ನಿರ್ವಹಿಸುವ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು ಈಗ ಸಣ್ಣಪುಟ್ಟ ನಗರಗಳಲ್ಲೂ ತಲೆಎತ್ತಿವೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿಯ ಪ್ರಕಾರ, ಈ ವರ್ಷ ಸುಮಾರು 48 ಲಕ್ಷ ವಿವಾಹಗಳು ದೇಶದಲ್ಲಿ ನಡೆಯಲಿವೆ. ಈ ಸೀಸನ್‌ನಲ್ಲಿ ಮದುವೆಯೊಂದರಿಂದಲೇ ಸುಮಾರು 6 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುವ ನಿರೀಕ್ಷಿಯಿದೆ. ನವಂಬರ್‌ನಿಂದ ಫೆಬ್ರವರಿ ತನಕ ಗರಿಷ್ಠ ಸಂಖ್ಯೆಯ ಮದುವೆಗಳು ಬುಕ್‌ ಆಗಿವೆ. ಇನ್ನು ಚಿಕ್ಕಪುಟ್ಟ ಮದುವೆಗಳನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವರದಿ ತಿಳಿಸಿದೆ.

ದೇಶದಾದ್ಯಂತ 75 ಪ್ರಮುಖ ನಗರಗಳಲ್ಲಿ ಮದುವೆಗೆ ಸಂಬಂಧಿಸಿದ ಸರಕುಗಳು ಮತ್ತು ಸೇವೆಗಳಲ್ಲಿ ವ್ಯವಹರಿಸುತ್ತಿರುವ ಪ್ರಮುಖ ವ್ಯಾಪಾರಿ ಸಂಸ್ಥೆಗಳಿಂದ ಅಂಕಿಅಂಶಗಳನ್ನು ಆಧರಿಸಿ ಸಿಎಐಟಿಯೂ ಈ ಅಂದಾಜುಮಾಡಿದೆ. 2024ರಿಂದ ಫೆಬ್ರವರಿ 2025 ರವರೆಗೆ ಬಿಡುವಿಲ್ಲದ ಮದುವೆಯ ಋತುವಿಗಾಗಿ ಅನೇಕ ಗ್ರಾಹಕರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.
ದಿಲ್ಲಿಯೊಂದರಲ್ಲೇ ಅಂದಾಜು 4.5 ಲಕ್ಷ ಮದುವೆಗಳು ನಡೆಯಲಿದ್ದು, ಈ ಋತುವಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ನಿರೀಕ್ಷಿಸಲಾಗಿದೆಯಂತೆ. ಕಳೆದ ವರ್ಷ ಈ ಋತುವಿನಲ್ಲಿ 35 ಲಕ್ಷ ವಿವಾಹಗಳಿಂದ ಒಟ್ಟು 4.25 ಲಕ್ಷ ಕೋಟಿ ರೂಪಾಯಿಗಳಷ್ಟೇ ಆದಾಯವಾಗಿತ್ತು. ಆದರೆ ಈ ಋತುವಿನಲ್ಲಿ ದೇಶಾದ್ಯಂತ ಸುಮಾರು 40 ಲಕ್ಷ ಮದುವೆಗಳನ್ನು 3 ಲಕ್ಷದಿಂದ ಪ್ರಾರಂಭವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವುದು ಎಂದು ಅಂದಾಜಿಸಲಾಗಿದೆ.
ಅದಲ್ಲದೇ ಏಳು ಲಕ್ಷ ಮದುವೆಗೆ 25 ಲಕ್ಷ ರೂ, 50 ಸಾವಿರ ಮದುವೆಗಳಿಗೆ 50 ಲಕ್ಷ ರೂ. ಹಾಗೂ ಇನ್ನುಳಿದಂತೆ 50 ಸಾವಿರ ಮದುವೆ ಸಮಾರಂಭಗಳಿಗೆ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಲಿದೆ ಎನ್ನಲಾಗಿದೆ. ಈ ಬಾರಿಯ ಮದುವೆಯ ವೆಚ್ಚಗಳನ್ನು ಸರಕು ಮತ್ತು ಸೇವೆಗಳ ನಡುವೆ ವಿಂಗಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಜವಳಿ, ಸೀರೆಗಳು, ಲೆಹೆಂಗಾಗಳು, ಎಲೆಕ್ಟ್ರಾನಿಕ್ಸ್, ವಿದ್ಯುತ್ ಉಪಕರಣಗಳು ಸೇರಿದಂತೆ ಗ್ರಾಹಕ ಬಾಳಿಕೆ ಬರುವ ವಸ್ತುಗಳು ಸೇರಿದಂತೆ ಉಡುಪುಗಳು ಒಳಗೊಂಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top