ದಂಪತಿ ಶವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಪತ್ತೆ

ಧರ್ಮಸ್ಥಳ: ಕಾಣೆಯಾಗಿದ್ದ ದಂಪತಿಯ ಶವ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಪತ್ತೆಯಾಗಿದೆ.

ಮೃತ ದಂಪತಿಯನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61), ಈಶ್ವರಮ್ಮ (52) ಎಂದು ಗುರುತಿಸಲಾಗಿದೆ.

ಅ.31 ರಂದು ದಂಪತಿಗಳು ನಾಪತ್ತೆಯಾಗಿದ್ದು. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ‌‌ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಹುಡುಕಾಡಿದಾಗ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ನ ಅಣೆಕಟ್ಟಿನಲ್ಲಿ ಶವಗಳು ಸಿಲುಕಿಕೊಂಡಿದ್ದು. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಉಜಿರೆ, ವೇಣೂರು ತಂಡದವರು ಶವಗಳನ್ನು ಮೇಲಕ್ಕೆತ್ತಿದ್ದಾರೆ.































 
 

ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆಗೆ ನಿಖರ ಕಾರಣ  ತಿಳಿದು ಬಂದಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top