ಕೊನೇ ಕ್ಷಣದಲ್ಲಿ ನೀವು ಅವರಲ್ಲ ಕ್ಷಮಿಸಿ ಎಂದು ಹೇಳಿ ವಾಪಸು ಕಳುಹಿಸಿದ ಅಧಿಕಾರಿಗಳು
ಮಂಗಳೂರು: ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಪ್ರಶಸ್ತಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಹೇಳಿ ಸರಕಾರ ಘೋರ ಅವಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸಮಾಜ ಸೇವಕ ಬಾಬು ಪಿಲಾರ್ ಎಂಬವರನ್ನು ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲಾಖೆ ಅಧಿಕಾರಿ ನೀಲಮ್ಮ ಎನ್ನುವವರು ಖುದ್ದು ನಿಮ್ಮನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ಆತಿಥ್ಯವನ್ನೂ ನೀಡಿ, ಕೊನೇ ಕ್ಷಣದಲ್ಲಿ ನೀವು ಅವರಲ್ಲ. ನಿಮಗೆ ಪ್ರಶಸ್ತಿ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ತನಕ ಹೋದ ಬಾಬು ಪಿಲಾರ್ ಅವಮಾನಿತರಾಗಿದ್ದಾರೆ.
ನೀವು ಸುವರ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಬೆಂಗಳೂರಿಗೆ ಬನ್ನಿ ಎಂದು ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವರಿಗೆ ಅಕ್ಟೋಬರ್ 31ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಮಾಡಿ ಹೇಳಿದ್ದಾರೆ. ಅದರಂತೆ ಬಾಬು ಪಿಲಾರ್ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿದ್ದಾರೆ. ಬಳಿಕ ಅವರಿಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಸಹ ನೀಡಿದ್ದಾರೆ. ನವೆಂಬರ್ 1ರಂದು ಸಂಜೆ ಪ್ರಶಸ್ತಿ ವಿತರಣೆ ವೇಳೆ ಕೊನೇ ಕ್ಷಣದಲ್ಲಿ ಬಾಬು ಪಿಲಾರ್‌ಗೆ ಪ್ರಶಸ್ತಿ ಇಲ್ಲ ಎಂದು ಹೇಳಿದ್ದಾರೆ. ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ. ಬಾಬು ಪಿಲಾರ್ ಬದಲು ಬಾಬು ಕಿಲಾರ್ ಆಗಬೇಕಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.
ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಂಕೀರ್ಣ ವಿಭಾಗದಲ್ಲಿ ಬಾಬು ಕಿಲಾರ್ ಹೆಸರು ಘೋಷಣೆಯಾಗಿತ್ತು. ಅದು ಬಾಬು ಪಿಲಾರ್ ಎಂದು ಬಾಬು ಪಿಲಾರ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಮಾಡಿ ಬೆಂಗಳೂರು ಬರಲು ಹೇಳಿದ್ದರು. ಕೊಠಡಿ ಕೂಡ ಕೊಟ್ಟು ಪ್ರಶಸ್ತಿ ಸ್ವೀಕರಿಸಲು ಹೇಳಿದ್ದರು. ಆದರೆ ಕುಮಾರ ಕೃಪಾ ಬಳಿ ಬಸ್ ಹತ್ತುವ ವೇಳೆ ನಿಮಗೆ ಪ್ರಶಸ್ತಿ ಇಲ್ಲ. ಮತ್ತೊಬ್ಬರು ಬಾಬು ಕಿಲಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೂ ಈ ಬಾಬು ಪಿಲಾರ್ ಆಯ್ಕೆಯಾಗಿದ್ದರು. ಆದರೆ ಜಿಲ್ಲಾ ಪ್ರಶಸ್ತಿ ಬಿಟ್ಟು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಹೆಸರು ಬದಲಾಗಿದೆ. ಇದರಿಂದ ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲ ಇತ್ತ ಸುವರ್ಣ ಮಹೋತ್ಸವ ಪ್ರಶಸ್ತಿಯೂ ಇಲ್ಲದೆ ಕಂಗಾಲಾಗಿದ್ದಾರೆ.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕ್ಷೇತ್ರದ ಬಾಬು ಪಿಲಾರ್ ಸಮಾಜ ಸೇವಕರಾಗಿದ್ದಾರೆ. ಅಸಂಖ್ಯಾತರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬಾಬು ಪಿಲಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.