ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಮಂಗಳವಾರ ಸಂಜೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
ಜ್ಞಾನಾನಂದ ಹೆಗ್ಡೆಯವರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಶಾಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಳಿಕ ಅನಾರೋಗ್ಯದಿಂದಾಗಿ ವ್ಯವಹಾರದಿಂದ ನಿವೃತ್ತಿ ಪಡೆದಿದ್ದ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.
ಮೃತರು ತಾಯಿ, ಪತ್ನಿ, ಪುತ್ರಿಯರು ಹಾಗೂ ಸಹೋದರರನ್ನು ಅಗಲಿದ್ದಾರೆ.