ಪುತ್ತೂರು: ಆಣಿಗುಂಡಿ ರಕ್ಷಿತಾರಣ್ಯ ಕಾಡಿನಿಂದ ಪೆರ್ನಾಜೆ ಮುಖಾಂತರವಾಗಿ ಅಮ್ಚಿನಡ್ಕ ಮುಖಾರಿಮೂಲೆಗೆ ಬಂದ ಆನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಘಟನೆ ನಡೆದಿದೆ.
ಮುಖಾರಿಮೂಲೆಯ ಅಬ್ದುಲ್ಲಾ ರಝಾಕ್ ಮತ್ತು ಶರತ್ ಕುಮಾರ್ ರೈ ಯವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಗೀಡು ಮಾಡಿದೆ. ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಇನ್ನೂ ಸ್ಪಂದಿಸುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ವಾರದ ಹಿಂದೆ ಅಮ್ಚಿನಡ್ಕ ಮಳಿ ಪೆರ್ನಾಜೆ ಸಮೀಪ ನೂಜಿ ಬೈಲು ಮುಖಾರಿ ಮೂಲೆ ಬಾಲಕೃಷ್ಣ ಆಚಾರ್ಯ, ನಾರಾಯಣ ಆಚಾರ್ಯ, ಚಂದ್ರಯ್ಯ ಆಚಾರ್ಯ ಹರೀಶ್ ಆಚಾರ್ಯಡ್ಕ ಎಂಬವರ ತೋಟಕ್ಕೆ ನುಗ್ಗಿ ಹಾನಿ ಮಾಡಿದ ಬೆನ್ನಲ್ಲೇ ಇದೀಗ ಮಂಗಳವಾರ ಪೆರ್ನಾಜೆ ಮೂಲಕ ಸರ್ವೆಮೂಲೆ ಕಾಡಿಗೆ ಲಗ್ಗೆಯಿಟ್ಟಿದೆ.
ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರೆ, ಅವರು ನೀವು ರಾತ್ರಿ ಹೊತ್ತು ಟೈಯರ್ ಹೊತ್ತಿಸಿ ಇಡಿ ಎಂದು ಹೇಳುತ್ತಾರೆ. ಅದಕ್ಕೆ ಗ್ರಾಮಸ್ಥರು, ರಾತ್ರಿ ಹೊತ್ತು ಟಯರ್ ಹೊತ್ತಿಸಿದರೆ ಕಾಡು ಹೊತ್ತಿ ಉರಿದರೆ ಯಾರು ಜವಾಬ್ದಾರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಈ ಕುರಿತು ಅಲ್ಲಿನ ಗ್ರಾಮಸ್ಥರು ನ.2 ರಂದು ಪುತ್ತೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತು ಅರಣ್ಯ ಸಚಿವರಿಗೆ ಅರಣ್ಯ ಇಲಾಖೆಯವರಿಗೆ ಪುತ್ತೂರು ಶಾಸಕ ಮುಖಾಂತರ ಮಾಡನ್ನೂರು ಮನವಿ ನೀಡಲಾಗುವುದು ಎಂದು ತಿಳಿಸಿದ್ದಾರೆ.