ಪುತ್ತೂರು : ದೇವಸ್ಥಾನಕ್ಕೆ ತೆರಳಿ ದೇವರ ಎದುರು ಕೈ ಮುಗಿದು ನಿಂತು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹಾ ಕಷ್ಟಗಳನ್ನು ಚೀಟಿ ಮೂಲಕ ಬರೆದು ದೇವರ ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಕುರಿತು ಬರೆದಿರುವುದು ತಿಳಿದು ಬಂದಿದೆ.
“ಸಮೀರ್ ಎಂಬಾತ ನನ್ನ ಜೀವನ ಹಾಳು ಮಾಡಿದ್ದಾನೆ. ಇಂದು ನಾನು ಮತ್ತು ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ಇದೇ ರೀತಿ ಅವರ ಜೀವನ ಕೂಡ ಹಾಳು ಆಗಬೇಕು. ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೆ ಇದು ನನ್ನ ಪ್ರಾರ್ಥನೆ” ಎಂದು ಬರೆಯಲಾಗಿದೆ.