ಅಕ್ರಮ ಕೋಳಿ ಅಂಕಕ್ಕೆ ದಾಳಿ | ಐವರ ಬಂಧನ, ಕೋಳಿ, ನಗದು ವಶಕ್ಕೆ

ಪುತ್ತೂರು : ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ ಕೋಳಿ ಅಂಕ ನಡೆಯುತ್ತಿತ್ತು. ಖಚಿತ ಮಾಹಿತಿ ಹಿನ್ನಲೆಯಲ್ಲಿ  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿಗಳು ದಾಳಿ ನಡೆಸಿ ಸ್ಥಳದಿಂದ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು 7710 ರೂ. ನಗದು ವಶಕ್ಕೆ ಪಡೆದು, ಐವರನ್ನು ಬಂಧಿಸಿದ್ದಾರೆ.

ಠಾಣೆಯ ಪಿ.ಎಸ್.ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳಾದ ಯೋಗೀಶ್, ರಾಧಾಕೃಷ್ಣ, ಪ್ರವೀಣ್ ರೈ, ಜಯಶ್ರೀ, ದೇವೇಂದ್ರ, ಭೀಮನಗೌಡ ಬಿರಾದರ್, ಅಸ್ತಮ್ ಯುವರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top